ಗಾಳಿಪಟ ಚಿತ್ರದಲ್ಲಿ ಚಟಪಟ ಮಾತನಾಡಿಕೊಂಡಿರುವ ತುಂಟ ಹುಡುಗಿಯ ಪಾತ್ರವನ್ನು ಮಾಡಿದ್ದ ಭಾವನಾ ರಾವ್ ಇದೀಗ ಬಾಲಿವುಡ್ ಗೆ ಹಾರಿದ್ದಾರೆ. ಹೌದು! ಹಿಂದಿ ಭಾಷೆಯಲ್ಲಿ ತಯಾರಾಗುತ್ತಿರುವ “ಧಾರಾವಿ ಬ್ಯಾಂಕ್” ಎಂಬ ವೆಬ್ ಸೀರೀಸ್ ಅಲ್ಲಿ ಭಾವನ ರಾವ್ ನಟಿಸುತ್ತಿದ್ದಾರೆ.

ಧಾರಾವಿ ಬ್ಯಾಂಕ್ ಒಂದು ಸ್ಲಂ ಏರಿಯಾದ ಸುತ್ತ ನಡೆಯುವ ಕಥೆಯಾಗಿದ್ದು, ಚಿತ್ರದಲ್ಲಿ ಒಬ್ಬ ಡಾನ್ ಇದ್ದು, ಪಾತ್ರವನ್ನು ಸುನಿಲ್ ಶೆಟ್ಟಿ ನಿರ್ವಹಿಸಲಿದ್ದಾರೆ. ಇಡೀ ಏರಿಯಾಗೆ ಡಾನ್ ಆಗಿರುವ ಇವರನ್ನು ಮಟ್ಟ ಹಾಕುವ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ವಿವೇಕ್ ಒಬಿರಾಯ್ ನಟಿಸುತ್ತಿದ್ದಾರೆ. ಮುಂಬೈನ ಒಂದು ಪ್ರಮುಖ ಸ್ಥಳವಾಗಿರುವ ಧಾರಾವಿಯನ್ನೇ ಈ ಚಿತ್ರಕಥೆಗೆ ತೆಗೆದುಕೊಂಡಿದ್ದು ಸೀರೀಸ್ ಗೂ ಕೂಡ “ಧಾರಾವಿ ಬ್ಯಾಂಕ್”ಎಂಬ ಹೆಸರಿಟ್ಟಿರುವುದು ವಿಶೇಷ.

ಈ ಸ್ಥಳದಲ್ಲಿ ನಡೆಯುವ ಕ್ರೈಂ ಹಾಗೂ ಡಾರ್ಕ್ ಸ್ಟೋರೀಸ್ ಗಳನ್ನು ವೆಬ್ ಸೀರೀಸ್ ಅಲ್ಲಿ ಚಿತ್ರಿಸಲಾಗುತ್ತಿದೆ. ಇಡೀ ವೆಬ್ ಸೀರೀಸ್ ಅಲ್ಲಿ ಹಲವಷ್ಟು ಪಾತ್ರಗಳಿದ್ದು ಹೆಚ್ಚಿನದೆಲ್ಲವೂ ಹೊಸ ಮುಖಗಳೇ. ಡಾನ್ ಆಗಿ ಪಾತ್ರನಿರ್ವಹಿಸುತ್ತಿರುವ ಸುನಿಲ್ ಶೆಟ್ಟಿ ಅವರ ಮಗಳಾಗಿ ಭಾವನಾ ರಾವ್ ಪಾತ್ರ ನಿರ್ವಹಿಸಲಿದ್ದಾರೆ.

ಅಂದ ಹಾಗೇ ಈ ಸೀರೀಸ್ ಅಲ್ಲಿ ಅವರು ಒಬ್ಬ ಲಾಯರ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಇಷ್ಟನ್ನು ಮಾತ್ರ ನಾನು ಹೇಳಬಲ್ಲೆ ಮತ್ತೆಲ್ಲವನ್ನು ನೀವು ವೆಬ್ ಸೀರೀಸ್ ನೋಡಿ ತಿಳಿಯಬೇಕು ಎಂದು ಹೇಳುತ್ತಾರೆ ಭಾವನಾ.

ಸಮಿತ್ ಕಕ್ಕಡ್ ನಿರ್ದೇಶಸಿರುವ ಈ ವೆಬ್ ಸೀರೀಸ್‌ನಲ್ಲಿ 10 ಎಪಿಸೋಡ್ ಗಳಿದ್ದು, ಮುಂಬೈ ನ ಕ್ರೈಂ ಸ್ಟೋರೀಸ್ ಅನ್ನು ಬಿಂಬಿಸುತ್ತವೆ. ಈವರೆಗೂ ಇಂತಹ ವಿಷಯವನ್ನು ಯಾರೂ ಟಚ್ ಮಾಡಿರಲಿಲ್ಲ ಹಾಗಾಗಿ ಈ ವೆಬ್ ಸೀರೀಸ್ ಬಹಳಷ್ಟು ವಿಶೇಷ. ಎಂದು ತಂಡ ಇದರ ಬಗ್ಗೆ ಮಾಹಿತಿ ನೀಡಿದೆ. ಓಟಿಟಿ ಪ್ಲಾಟ್ ಫಾರ್ಮ್ ಎಂ ಎಕ್ಸ್ ಪ್ಲೇಯರ್ ನಲ್ಲಿ ಬಿಡುಗಡೆಯಾಗುತ್ತಿರುವ ಈ ವೆಬ್ ಸೀರೀಸ್, ಒಳ್ಳೆಯ ಇನ್ಫೋ- ಎಂಟರ್ಟೈನಿಂಗ ಕಂಟೆಂಟ್ ಕೊಡುವ ಹಾಗಿದೆ.

ಈಗಾಗಲೇ ಇದರ ಟ್ರೈಲರ್ ಬಿಡುಗಡೆಯಾಗಿದ್ದು ಭಾರಿ ಕುತೂಹಲ ಕೆರಳಿಸಿದೆ. ಇದೇ ನವೆಂಬರ್ 19 ರಂದು ಧಾರಾವಿ ಬ್ಯಾಂಕ್ ವೆಬ್ ಸೀರೀಸ್ ಬಿಡುಗಡೆಯಾಗಲಿದ್ದು, ಮುಂಬೈನ ಒಂದು ಕರಾಳ ಮುಖವನ್ನು ತೋರಿಸುವ ಪ್ರಯತ್ನದಲ್ಲಿದೆ. ಇಡೀ ಸೀರೀಸ್ ಬಹಳಷ್ಟು ವಿಭಿನ್ನತೆಯನ್ನು ಹೊಂದಿದ್ದು ಪ್ರೇಕ್ಷಕರು ಈಗಾಗಲೇ ಇದರ ಬಿಡುಗಡೆಗೆ ಕಾಯುತ್ತಿದ್ದಾರೆ ಎಂದೇ ಹೇಳಬಹುದು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ