ಭಾಗ್ಯಲಕ್ಷ್ಮಿ ಧಾರಾವಾಹಿ ಮೂಲಕ ಕಿರುತೆರೆಗೆ ವಾಪಸ್ ಆಗಿರುವ ನಟಿ ಸುಷ್ಮಾ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ. ಸುಮಾರು ಹದಿನೈದು ವರ್ಷಗಳ ಹಿಂದೆ ಗುಪ್ತಗಾಮಿನಿ ಧಾರಾವಾಹಿಯಲ್ಲಿ ಭಾವನ ಆಗಿ ಕಾಣಿಸಿಕೊಂಡ ಈ ನಟಿ, ಆ ಪಾತ್ರದ ಮೂಲಕ ಕಿರುತೆರೆ ಪ್ರಿಯರ ಮನಗೆದ್ದಿದ್ದರು. ಅದಾದ ಮೇಲೆ ಬೆರಳೆಣಿಕೆಯಷ್ಟು ಧಾರವಾಹಿಗಳಲ್ಲಿ ಆಕೆ ಕಾಣಿಸಿಕೊಂಡಿದ್ದರೂ ಇತ್ತೀಚೆಗಂತೂ ಯಾವುದೇ ಸೀರಿಯಲ್ ಗಳಲ್ಲಿ ಈಕೆ ನಟಿಸಿಲ್ಲ.

ಒಂದಷ್ಟು ವರ್ಷದ ಕಿರುತೆರೆ ಜರ್ನಿ ನಂತರ ಕಾರ್ಯಕ್ರಮ ನಿರೂಪಣೆಯಿಂದ ಮುಖ ಮಾಡಿದ ಈಕೆ ಬಹಳಷ್ಟು ಕಾರ್ಯಕ್ರಮಗಳಲ್ಲಿ ನಿರೂಪಿಸಿ ಸೈ ಎನಿಸಿಕೊಂಡರು.ಇದೀಗ ಮತ್ತೆ ಧಾರಾವಾಹಿಗೆ ವಾಪಸಾಗಲು ನಿರ್ಧರಿಸಿದ ಆಕೆ ಭಾಗ್ಯಲಕ್ಷ್ಮಿ ಸೀರಿಯಲ್ ಮೂಲಕ ಕಾಣಿಸಿಕೊಂಡಿರುವುದು ಪ್ರೇಕ್ಷಕರಲ್ಲಿ ಸಂತಸ ತಂದಿದೆ.

ಹೌದು! ವರ್ಷಗಳ ನಂತರ ಸೀರಿಯಲ್ ಪ್ರೇಕ್ಷಕರ ನೆಚ್ಚಿನ ನಟಿ ಸುಷ್ಮಾ ‘ಭಾಗ್ಯಲಕ್ಷ್ಮಿ’ ಧಾರವಾಹಿಯಲ್ಲಿ ಭಾಗ್ಯ ಪಾತ್ರ ಮಾಡಿ ಮತ್ತೆ ತಮ್ಮ ನಟನೆಯ ಮೂಲಕ ಎಲ್ಲರನ್ನು ರಂಜಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಆಕೆ ” ನಾನು ಈ ಕ್ಷೇತ್ರಕ್ಕೆ ಬಂದು ಸುಮಾರು 20 ವರ್ಷಗಳ ಮೇಲಾಯಿತು. ಯಾವುದೇ ಪಾತ್ರ ವಾಗಲಿ ಜನರಿಗೆ ಬೋರ್ ಹೊಡೆಸುವಷ್ಟು ನಾವು ಅದರಲ್ಲಿ ಕಾಣಿಸಿಕೊಳ್ಳಬಾರದು. ಈ ಕಾರಣಕ್ಕೆ ನಾನು ಸ್ವಲ್ಪ ವರ್ಷಗಳ ಕಾಲ ಧಾರವಾಹಿಯಿಂದ ದೂರ ಉಳಿದೆ. ನಂತರ ನಿರೂಪಣೆ ಮಾಡಲು ಶುರು ಮಾಡಿದಾಗ ನಿರೂಪಣೆಯೇ ಸುಲಭ ಎಂದೆನಿಸಿದ್ದು ಇದೆ. ಈಗ ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಭಾಗ್ಯ ತುಂಬಾ ಒಳ್ಳೆಯ ಪಾತ್ರ ಎಂದೆನಿಸಿತು ಹಾಗಾಗಿ ಒಪ್ಪಿಕೊಂಡೆ” ಎಂದರು.

ನಟನೆಯಿಂದ ತುಸು ದೂರ ಉಳಿದರು ಈಕೆ ಬಹಳಷ್ಟು ಕಾರ್ಯಕ್ರಮಗಳಲ್ಲಿ ರಿಯಾಲಿಟಿ ಶೋ ಗಳಲ್ಲಿ ಮುಂಚಿನಿಂದಲೂ ನಿರೂಪಣೆ ಮಾಡಿಕೊಂಡು, ನಟನೆಗೂ ಜೈ ಮಾತಿಗೂ ಸೈ ಎನಿಸಿಕೊಂಡವರು. “ಒಬ್ಬ ಮಹಿಳೆ ತನ್ನ ಗಂಡನಿಗಾಗಿ ಅವನ ಕುಟುಂಬಕ್ಕಾಗಿ ಏನನ್ನು ಬೇಕಾದರೂ ತ್ಯಾಗ ಮಾಡಲು ತಯಾರಿರುತ್ತಾಳೆ. ಈ ರೀತಿಯ ಟ್ರೆಡಿಶನಲ್ ಪಾತ್ರ ಸಿಕ್ಕಿದ್ದು ಖುಷಿಯಾಯಿತು ಹಾಗಾಗಿ ಒಪ್ಪಿಕೊಂಡೆ” ಎಂದು ಪಾತ್ರದ ಬಗ್ಗೆ ಮಾತನಾಡಿದ್ದಾರೆ.

ಮತ್ತೆ ಸೀರಿಯಲ್ ಕಡೆಗೆ ವಾಪಸ್ ಆಗುತ್ತಿದ್ದಂತೆ ತಮ್ಮ ನೈಜ ನಟನೆಯಿಂದ ಮತ್ತೊಮ್ಮೆ ಧಾರವಾಹಿ ಪ್ರಿಯರ ಮನ ಗೆದ್ದಿದ್ದಾರೆ ನಟಿ ಸುಷ್ಮಾ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ