ಪವನ್ ಒಡೆಯರ್ ನಿರ್ದೇಶನದ ರೆಮೋ ಚಿತ್ರ ಲವ್ ಡ್ರಾಮಾ ಕಥಹಂದರವನ್ನು ಹೊಂದಿದ್ದು ಈಗ ಈ ಚಿತ್ರದಲ್ಲಿ ಆಶಿಕ ರಂಗನಾಥ್ ಅವರು ನಾಯಕಿಯ ಪಾತ್ರವನ್ನು ಮಾಡಲಿದ್ದಾರೆ ಎಂಬ ಸುದ್ದಿ ಹೊರಬಂದಿದೆ. ರಾಂಬೊ 2, ಕೋಟಿಗೊಬ್ಬ 3 ಲ್, ಮುಗುಳುನಗೆ ಇತ್ಯಾದಿ ಚಿತ್ರಗಳ ಮೂಲಕ ಜನರ ಮನರಂಜಿಸಿದ್ದ ನಟಿ ಆಶಿಕಾ ರಂಗನಾಥ್ ಗೆ ಇದೀಗ ಒಂದು ಅದ್ಭುತ ಪಾತ್ರ ದೊರಕಿದೆ.

ಈ ಮೊದಲು ಗೂಗ್ಲಿ ಚಿತ್ರವನ್ನು ನಿರ್ದೇಶಿಸಿದ್ದ ಪವನ್ ಒಡೆಯರ್ ಅವರ ರೆಮೋ ಚಿತ್ರದಲ್ಲಿ ನಾಯಕಿಯಾಗಿ ಅವಕಾಶ ಸಿಕ್ಕಿದ್ದು ಇದರ ಬಗ್ಗೆ ಸಂತಸ ವ್ಯಕ್ತಪಡಿಸಿದ ಆಶಿಕಾ ರಂಗನಾಥ ತಮ್ಮ ಅನುಭವ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

“ನಿರ್ದೇಶಕ ಪವನ್ ಒಡೆಯರ್ ಅವರ ಗೂಗ್ಲಿ ಚಿತ್ರ ನೋಡಿದ ನಂತರ ನನಗೆ ಅವರೊಂದಿಗೆ ಕೆಲಸ ಮಾಡಲು ಬಹಳ ಆಸಕ್ತಿ ಇತ್ತು. ಇದೀಗ ಲವ್ ಸ್ಟೋರಿ ಸಿಕ್ಕಿರುವುದು ನನ್ನ ಪುಣ್ಯ ಯಾಕೆಂದರೆ ಲವ್ ಸ್ಟೋರಿಗಳಲ್ಲಿ ಹೀರೋಗೆ ಸಮನಾಗಿ ಹೀರೋಯಿನ್ ಗೂ ಪ್ರಾಮುಖ್ಯತೆ ಇರುತ್ತದೆ” ಎಂದಿದ್ದಾರೆ.

ನಟ, ನಿರ್ದೇಶಕ ಶರಣ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ರಾಂಬೊ 2 ಚಿತ್ರದಲ್ಲಿ “ಚುಟು ಚುಟು ಅಂತ್ತೈತಿ” ಹಾಡಿಗೆ ಹೆಜ್ಜೆ ಹಾಕಿದ ಆಶಿಕಾ ರಂಗನಾಥ್ ಅವರನ್ನು ಸಿನಿರಂಗ ಬಹಳ ಮೆಚ್ಚಿತ್ತು. ಅದಾದ ಮೇಲೆ ಈ ನಟಿಗೆ ತೆಲುಗು, ತಮಿಳು ಚಿತ್ರಗಳಿಂದ ತುಂಬಾ ಆಫರ್ ಬಂತು. ಅಷ್ಟೇ ಅಲ್ಲದೆ ಇತರೆ ಬೇರೆ ಬೇರೆ ದೊಡ್ಡ ನಟರ ಜೊತೆ ನಟಿಸಿರುವ ಆಶಿಕಾ ರಂಗನಾಥ್ ಅವರಿಗೆ ಇದೀಗ ರೆಮೋ ಅಲ್ಲಿ ಪಾತ್ರ ಸಿಕ್ಕಿದ್ದು ಸಂತಸ ತಂದಿದೆ.

ಆಶಿಕಾ ಅವರ ಮುಖದಲ್ಲಿ ಕಾಣುವ ಮುಗ್ಧತೆ ರೆಮೋ ನಾಯಕಿ ಪಾತ್ರಕ್ಕೆ ಸರಿಯಾಗುತ್ತದೆ ಎಂದು ಅಭಿಪ್ರಾಯ ಪಟ್ಟಿರುವ ಪವನ್ ಒಡೆಯರ್ ಅವರು ಆಶಿಕಾ ಅವರನ್ನು ಈ ಚಿತ್ರಕ್ಕೆ ಸೆಲೆಕ್ಟ್ ಮಾಡಿದ್ದಾರೆ.

ಗೂಗ್ಲಿ ಅದೆಷ್ಟು ಯಶಸ್ವಿಯಾಗಿತ್ತು ಎಂಬುದು ಎಲ್ಲರಿಗೂ ಗೊತ್ತು. ಅದೇ ನಿರ್ದೇಶಕ ಇದೀಗ ರೆಮೋ ಚಿತ್ರವನ್ನು ಹೊರತಂದಿರುವುದರಿಂದ ಚಿತ್ರಕಥೆ ಬಹಳಷ್ಟು ವಿಭಿನ್ನವಾಗಿರುತ್ತದೆ ಎಂಬ ಕುತೂಹಲ ಅಭಿಪ್ರಾಯ ಪ್ರೇಕ್ಷಕದಲ್ಲಿದೆ. ಹೇಗೆ ಏನು ಎಂಬುದನ್ನು ಕಾದು ನೋಡಬೇಕಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ