‘ಹೃದಯ ಹೃದಯ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಅನುಪ್ರಭಾಕರ ನಂತರ ಸ್ನೇಹಲೋಕ, ಪ್ರೀತಿ ನೀ ಇಲ್ಲದೆ ನಾ ಹೇಗಿರಲಿ ಇತ್ಯಾದಿ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. 1999ರಿಂದ ಇಲ್ಲಿಯವರೆಗೆ ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅನು ಪ್ರಭಾಕರ್ ನಂತರ ಸಿನಿ ರಂಗದಿಂದ ಸಣ್ಣ ಬ್ರೇಕ್ ತೆಗೆದುಕೊಂಡರು.

ಮುಂದೆ ‘ನಮ್ಮಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆ ಜಗತ್ತಿಗೆ ಕಾಲಿಟ್ಟರು. ಇದೀಗ ಹೊಸ ಸುದ್ದಿ ಎಂದರೆ ಅನು ಪ್ರಭಾಕರ್ ಅವರು “ಏಜೆಂಟ್” ಎಂಬ ಸಿನಿಮಾ ಮೂಲಕ ತೆಲುಗು ಚಿತ್ರ ರಂಗಕ್ಕೆ ಕಾಲಿಡುತ್ತಿರುವುದು. ಹೌದು, ಸದ್ಯ ಏಜೆಂಟ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಇರುವ ಇವರು ಇತ್ತೀಚೆಗೆ ಪತ್ರಕರ್ತರೊಂದಿಗೆ ತಮ್ಮ ಮೊದಲ ತೆಲುಗು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸುರೇಂದ್ರ ರೆಡ್ಡಿ ನಿರ್ದೇಶನದ ಅಖಿಲ್ ಅಕ್ಕಿಯೇನಿ ಹಾಗೂ ಸಾಕ್ಷಿ ವೈದ್ಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಸಿನೆಮಾದಲ್ಲಿ ಅನು ಪ್ರಭಾಕರ್ ಅಭಿನಯಿಸುತ್ತಿದ್ದಾರೆ. ಸದ್ಯ ಅವರ ಪಾತ್ರದ ಶೂಟಿಂಗ್ ಕೆಲಸ ಮುಗಿದಿದ್ದು ಡಬ್ಬಿಂಗ್ ಬಾಕಿಯಿದೆ. “ನನ್ನ ನಿರರ್ಗಳ ತೆಲುಗು ಕೇಳಿ ನನಗೇ ನನ್ನ ಪಾತ್ರಕ್ಕೆ ಡಬ್ ಮಾಡಲು ಕೇಳಿಕೊಂಡಿದ್ದಾರೆ. ಆದರೆ ಮಾತನಾಡುವುದಕ್ಕೂ ಡಬ್ಬಿಂಗಿಗೂ ಬಹಳಾ ವ್ಯತ್ಯಾಸ ಇದೆ. ಹಾಗಾಗಿ ಚಿತ್ರ ತಂಡ ಹೇಗೆ ಹೇಳ್ತಾರೋ ಹಾಗೆ. ನನ್ನ ತಮಿಳು ಚಿತ್ರ ಈ ಮೊದಲು ತೆಲುಗಿಗೆ ಡಬ್ಬ್ ಆಗಿದೆಯಾದರೂ ಇದು ನನ್ನ ಮೊದಲ ತೆಲುಗು ಚಿತ್ರ.” ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಏಜೆಂಟ್ ಸಿನಿಮಾದ ನಿರ್ದೇಶಕ ಸುರೇಂದ್ರ ರೆಡ್ಡಿ ಅವರ ಬಗ್ಗೆ ಮಾತನಾಡಿದ ಅವರು “ಎಲ್ಲವೂ ಬಹಳಾ ಬೇಗ ಯಾವುದೇ ಗೊಂದಲಗಳಿಲ್ಲದೆ ನಡೆಯುವಂತೆ ನೋಡಿಕೊಳ್ಳುವ ಟ್ಯಾಲೆಂಟ್ ಅವರಲ್ಲಿದೆ. ಎಲ್ಲರಿಗೂ ಕಂಫರ್ಟ್ ಝೋನ್ ನೀಡಿ ಕೆಲಸದ ಕಡೆ ಗಮನಹರಿಸಲು ಸಹಕಾರಿಯಾಗುವಂತೆ ನೋಡಿಕೊಳ್ಳುತ್ತಾರೆ. ಒಬ್ಬ ಕಲಾವಿದನ ಸಾಮರ್ಥ್ಯವನ್ನು ಚೆನ್ನಾಗಿ ಅರಿತು ಅವರಿಂದ ಒಳ್ಳೆಯ ನಟನೆಯನ್ನು ಹೊರತೆಗೆವ ಚಾಕಚಕ್ಯತೆ ಅವರಲ್ಲಿದೆ. ಯುವ ನಟರು ಪರದೆಮೇಲೆ ಬರಬೇಕೆಂಬ ತುಡಿತ ಮನಸ್ಸಿಗೆ ಖುಷಿ ನೀಡುತ್ತದೆ.” ಎಂದರು.

“ಇದಲ್ಲದೆ ಸದ್ಯಕ್ಕೆ ಇನ್ನೂ ಒಂದೆರೆಡು ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಅವಿನಾಶ್ ಅವರ ನಿರ್ದೇಶನದ “ಹಗ” ಸಿನಿಮಾದಲ್ಲಿ ಒಂದು ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೀನಿ. ಇನ್ನೊಂದು ಸಿನಿಮಾದಲ್ಲಿ ನೆಗೆಟಿವ್ ರೋಲ್ ಮಾಡಲಿದ್ದೇನೆ. ಪ್ರೇಕ್ಷಕರು ಇದುವರೆಗೂ ನನ್ನನ್ನು ನೆಗೆಟೀವ್ ರೋಲ್ ನಲ್ಲಿ ನೋಡಿಲ್ಲ ಹಾಗಾಗಿ ಇದು ನನಗೂ ಅವರಿಗೂ ಒಂದು ಹೊಸ ಅನುಭವ. ಸದ್ಯಕ್ಕೆ ತಿಂಗಳ ಒಂದು ವಾರ ಟೆಲಿವಿಷನ್ ಶೋಗೆ ಹಾಗೂ ಉಳಿದ ದಿನಗಳು ಸಿನಿಮಾ ಶೂಟಿಂಗೆಗೆ ಮೀಸಲಿಟ್ಟೀದ್ದೇನೆ.” ಎಂದು ತಮ್ಮ ಅನುಭವ ಹಾಗೂ ಸದ್ಯದ ಬ್ಯುಸಿ ಶೆಡ್ಯೂಲ್ ಬಗ್ಗೆ ಮಾಹಿತಿ ನೀಡಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ