ತಮಿಳು ಕಿರುತೆರೆಯಲ್ಲಿ ಜನಪ್ರಿಯ ಮುಖವಾಗಿರುವ ನಟಿ ಅಕ್ಷಿತಾ ಬೋಪಯ್ಯ ಅವರು ನಟ ಸಿದ್ಧಾರ್ಥ್ ಕಪಿಲವಾಯಿ ಅವರೊಂದಿಗೆ ಆಕ್ಸಿಜನ್ ತಾಂಡಲೇ ಚಿತ್ರದ ಮೂಲಕ ಕಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆಕಾಶ್ ನಿರ್ದೇಶನದ ಈ ಚಿತ್ರದ ಶೂಟಿಂಗ್ ಮುಂದಿನ ತಿಂಗಳು ಆರಂಭವಾಗಲಿದೆ.

ತಮಿಳು ಚಿತ್ರಗಳಿಗೂ ದಾರಿ ತೆರೆದುಕೊಳ್ಳುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ ಅಕ್ಷಿತಾ. “ನನಗೆ ತಮಿಳು ಭಾಷೆಯ ಪರಿಚಯವಿದೆ. ನನ್ನ ತಮಿಳು ಧಾರಾವಾಹಿಯಾದ ಕಣ್ಣನ ಕಣ್ಣೆಗೆ ತಂಡವು ನನ್ನ ನಟನಾ ಕೌಶಲ್ಯ ನೋಡಿ ಆರಿಸಿದ್ದರು. ಪಾತ್ರಕ್ಕೆ ನಾನು ಚೆನ್ನಾಗಿ ಹೊಂದಿಕೊಳ್ಳುತ್ತೇನೆ ಎಂದು ಅವರು ಭಾವಿಸಿದರು” ಎಂದು ಹೇಳುತ್ತಾರೆ.

ಅಂದ ಹಾಗೆ ಆಕ್ಸಿಜನ್ ತಾಂಡೇಲ್ ನಲ್ಲಿ ಅಕ್ಷಿತಾ ಶ್ರೀಮಂತ ಕುಟುಂಬದ ಮುಗ್ಧ ಹುಡುಗಿಯಾಗಿ ನಟಿಸಿದ್ದಾರಂತೆ. “ಅವಳು ಒಬ್ಬ ಹುಡುಗನೊಂದಿಗೆ ಪ್ರೀತಿಯಲ್ಲಿ ಬೀಳುತ್ತಾಳೆ. ಆದರೆ ಎಲ್ಲವೂ ಸುಗಮವಾಗಿ ನಡೆಯುತ್ತಿರುವಾಗ, ಅವರು ವಿವಿಧ ಕಾರಣಗಳಿಗಾಗಿ ಬೇರ್ಪಡುತ್ತಾರೆ. ಇದು ಕಥೆಯ ತಿರುಳು” ಎನ್ನುತ್ತಾರೆ.

ಇನ್ನು ಕನ್ನಡದಲ್ಲಿ ಕರ್ನಾಟಕದ ಅಳಿಯ ಎಂಬ ಚಿತ್ರ ಕೈಯಲ್ಲಿದೆಯಂತೆ. “ಇದು ರೋಲರ್ ಕೋಸ್ಟರ್ ಸವಾರಿಯಲ್ಲಿ ಪ್ರೇಕ್ಷಕರನ್ನು ಕರೆದೊಯ್ಯುವ ರೋಮ್ಯಾಂಟಿಕ್ ಹಾಸ್ಯ” ಎಂಬುದು ಅಕ್ಷಿತಾ ಬೋಪಯ್ಯ ಅಭಿಪ್ರಾಯ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ