ದಿಲ್ ಪಸಂದ್ ಚಿತ್ರ ಇದೇ ನವೆಂಬರ್ 11ಕ್ಕೆ ಬಿಡುಗಡೆಯಾಗುತ್ತಿರುವುದು ಒಂದೆಡೆಯಾದರೆ ಇದೀಗ ಚಿತ್ರತಂಡ ಪ್ರೇಕ್ಷಕರಿಗೆ ಹೊಸದೊಂದು ಸರ್ಪ್ರೈಸ್ ನೀಡುತ್ತಿದೆ. ಹೌದು, ನಟ ಡಾರ್ಲಿಂಗ್ ಕೃಷ್ಣ ಅಭಿನಯದ “ದಿಲ್ ಪಸಂದ್ ” ಚಿತ್ರದಲ್ಲಿ ನಟ ಅಜಯ್ ರಾವ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ನಾಯಕಿಯರಾಗಿ ನಿಶ್ಟಿತಾ ನಾಯ್ಡು ಹಾಗೂ ಮೇಘ ಶೆಟ್ಟಿ ನಟಿಸಿದರೆ, ಸಾಧು ಕೋಕಿಲಾ, ತಬಲ ನಾಣಿ, ರಂಗಾಯಣ ರಘು, ಗಿರಿ, ಅರುಣ ಬಾಲರಾಜ್ ಮುಂತಾದವರೂ ಇತರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶಿವ ತೇಜಸ್ ನಿರ್ದೇಶನದ ಈ ಚಿತ್ರಕ್ಕೆ ರಶ್ಮಿ ಫಿಲಂಸ್ ಬ್ಯಾನರ್ನಡಿಯಲ್ಲಿ ಸಮಂತ್ ಕ್ರಾಂತಿಯವರು ನಿರ್ಮಾಪಕರಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಶೇಖರ್ ಚಂದ್ರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ದಿಲ್ ಪಸಂದ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಕ್ತಾಯ ಹಂತದಲ್ಲಿರುವುದರಿಂದ ಸದ್ಯದಲ್ಲೇ ಸೆನ್ಸಾರ್ ಮಂಡಳಿ ಚಿತ್ರ ವೀಕ್ಷಿಸಿ ಸರ್ಟಿಫಿಕೇಟ್ ನೀಡಲಿದೆ.

ಫ್ಯಾಮಿಲಿ ಸಂಟಿಮೆಂಟ್ ಇರುವ ಈ ಚಿತ್ರ ಪ್ರೇಮಕತೆಯೊಂದನ್ನೂ ಹೇಳಲಿದೆ. ಅಜಯ್ ರಾವ್ ಅವರ ಅತಿಥಿ ಪಾತ್ರ, ಚಿತ್ರ ಕತೆಯಲ್ಲಿ ಬಹುದೊಡ್ಡ ಟ್ವಿಸ್ಟ್ ನೀಡಲಿದೆ ಎಂದಷ್ಟೇ ಚಿತ್ರ ತಂಡ ಹೇಳಿದೆ. ಈಗಾಗಲೇ ಚಿತ್ರದ ಟ್ರೇಲರ್ ಹೊರಬಂದಿದ್ದು ಚಿತ್ರದ ದ್ವಿತೀಯಾರ್ಧದಲ್ಲಿ ಕಾಣಿಸಿಕೊಳ್ಳಲಿರುವ ನಟ ಅಜಯ್ ರಾವ್ ಯಾವ ರೀತಿಯ ಟ್ವಿಸ್ಟ್ ನೀಡಲಿದ್ದಾರೆ ಎಂಬುದು ಸದ್ಯದ ಕುತೂಹಲವಾಗಿದೆ. ನವೆಂಬರ್ 11ಕ್ಕೆ ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗಲಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ