ನಿರ್ಮಾಪಕ ಎಚ್ ಪ್ರಕಾಶ್ ಅವರು ಈ ಬಾರಿಯ ದೀಪಾವಳಿಗೆ ಹೊಸ ಸಿನಿಮಾವೊಂದರ ಬಗ್ಗೆ ಮಾತನಾಡಿದ್ದು ಈ ಬಾರಿಯೂ ಹೊಸ ನಟರಿಗೆ ಅವಕಾಶ ನೀಡಲಿದ್ದಾರೆ. ಎ ಎಸ್ ಎನ್ ಅಲಿಯಾಸ್ ಅವನೇ ಶ್ರೀಮನ್ನಾರಾಯಣ, ‘ರಂಗಿ ತರಂಗ’ ಚಿತ್ರಗಳ ನಿರ್ಮಾಪಕರಾಗಿ ಖ್ಯಾತಿ ಪಡೆದಿರುವ ಎಚ್ ಕೆ ಪ್ರಕಾಶ್ ಈ ಬಾರಿ ನಟ ಅಜಯ್ ರಾವ್ ನಟನೆಯಲ್ಲಿ ಚಿತ್ರವೊಂದನ್ನು ಹೊರತರಲಿದ್ದಾರೆ. ಅವರ ಶ್ರೀದೇವಿ ಎಂಟರ್ಪೈಸರ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಐದನೆಯ ಚಿತ್ರ ಇದಾಗಿದ್ದು ಬಹಳಷ್ಟು ಕುತೂಹಲವನ್ನು ಮೂಡಿಸಿದೆ.

ಚಿತ್ರದ ನಾಯಕನಾಗಿ ಅಜಯ್ ರಾವ್ ಅಭಿನಯಿಸಲಿದ್ದು, ನಿರ್ದೇಶಕರಾಗಿ ಅಭಿಷೇಕ್ ಎಂ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಹೊಸ ನಿರ್ದೇಶಕರಿಗೆ ಅವಕಾಶ ನೀಡುತ್ತಿದ್ದಾರೆ ಎಚ್ ಕೆ ಪ್ರಕಾಶ್. ನವ ನಿರ್ದೇಶಕ ಅಭಿಷೇಕ್ ಎಂ ಈ ಮೊದಲು ಸಿಂಪಲ್ ಸುನಿ ಅವರೊಂದಿಗೆ ಸಹ ನಿರ್ದೇಶಕರಾಗಿ ‘ಸಿಂಪಲ್ಲಾಗ್ ಒಂದು ಲವ್ ಸ್ಟೋರಿ’, ‘ಆಪರೇಶನ್ ಅಲಮೇಲಮ್ಮ’ ‘ಬಹುಪರಾಕ್’ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಬ್ಯಾಂಕ್ ಒಂದನ್ನು ದರೋಡೆ ಮಾಡುವವರ ಕತೆ ಇದಾಗಿದೆ ಎಂದಷ್ಟೇ ಹೇಳಿರುವ ಚಿತ್ರತಂಡ ಸದ್ಯಕ್ಕೆ ಚಿತ್ರದ ಪ್ರಿಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ಚಿತ್ರದ ನಾಯಕಿ ಹಾಗೂ ಸಹ ನಟರ ವಿವರ ಇನ್ನೂ ತಿಳಿದಿಲ್ಲ. ಜನವರಿಯಲ್ಲಿ ಶೂಟಿಂಗ್ ಪ್ರಾರಂಭವಾಗಲಿದ್ದು ಸ್ಯಾಂಡಿ ಸಂಗೀತ ನಿರ್ದೇಶನ, ರಾಗು ಕಲಾ ನಿರ್ದೇಶನ ಹಾಗೂ ಅಭಿಷೇಕ್ ಕಾಸರಗೋಡು ಕ್ಯಮರಾ ನಿರ್ದೇಶನ ಮಾಡಲಿದ್ದಾರೆ.

‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಎಂಬ ಇಂಟ್ರೆಸ್ಟಿಂಗ್ ಟೈಟಲ್ ಅನ್ನು ಅನೌನ್ಸ್ ಮಾಡುವ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ