ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿಯಲ್ಲಿ ನಾಯಕಿ ‘ಸನ್ನಿಧಿ’ಯಾಗಿ ನಟಿಸುವ ಮೂಲಕ ಕರುನಾಡಿನ ಮನೆ ಮಗಳಾಗಿ ಜನಪ್ರಿಯತೆ ಗಳಿಸಿರುವ ವೈಷ್ಣವಿ ಗೌಡ ವರ್ಷಗಳ ನಂತರ ಕಿರುತೆರೆಯತ್ತ ಮರಳಿದ್ದಾರೆ. ಎರಡು ವರ್ಷಗಳ ನಂತರ ಮತ್ತೆ ಕಿರುಪರದೆಯತ್ತ ಕಾಲಿಟ್ಟಿರುವ ವೈಷ್ಣವಿ ಗೌಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.

ಲಕ್ಷಣ ಧಾರಾವಾಹಿಯಲ್ಲಿ ವೈಷ್ಣವಿ ಹೆಸರಿನ ಪಾತ್ರದಲ್ಲಿ ನಟಿಸುತ್ತಿರುವ ವೈಷ್ಣವಿ ಗೌಡ ಎಂಟ್ರಿ ಧಾರಾವಾಹಿಗೆ ಯಾವ ರೀತಿಯ ಟ್ವಿಸ್ಟ್ ನೀಡಲಿದೆ ಎಂದು ಮುಂದಿನ ದಿನಗಳಲ್ಲಿ ವೀಕ್ಷಕರಿಗೆ ತಿಳಿಯಬೇಕಿದೆ.

ದೇವಿ ಧಾರಾವಾಹಿಯ ಮೂಲಕ ಕಿರುತೆರೆ ಪಯಣ ಶುರು ಮಾಡಿರುವ ವೈಷ್ಣವಿ ಗೌಡ ಮೊದಲ ಧಾರಾವಾಹಿಯಲ್ಲಿಯೇ ಮನೆ ಮಾತಾದ ಚೆಲುವೆ. ಮುಂದೆ ಪುನರ್ ವಿವಾಹ ಧಾರಾವಾಹಿಯಲ್ಲಿಯೂ ಅಭಿನಯಿಸಿದ್ದ ಈಕೆ
ಬೆಳ್ಳಿತೆರೆಯಲ್ಲಿಯೂ ಮಿಂಚಿದ ಪ್ರತಿಭೆ.

ಗಿರ್ ಗಿಟ್ಲೆ ಸಿನಿಮಾದ ಮೂಲಕ ಹಿರಿತೆರೆಯತ್ರ ಮುಖ ಮಾಡಿದ್ದ ವೈಷ್ಣವಿ ಅಲ್ಲೂ ಕೂಡಾ ತಮ್ಮ ನಟನೆಯ ಮೂಲಕ ಮನ ಸೆಳೆದಿದ್ದಾರೆ. ಮುಂದೆ ಬಹುಕೃತ ವೇಷಂ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈಕೆ ಬೆಳ್ಳಿಚುಕ್ಕಿ ಹಳ್ಳಿಹಕ್ಕಿ ಸಿನಿಮಾದಲ್ಲಿಯೂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿಯೂ ಮೋಡಿ ಮಾಡಿದ್ದ ಗುಳಿ ಕೆನ್ನೆ ಹುಡುಗಿಯ ಕಂ ಬ್ಯಾಕ್ ಕಿರುತೆರೆ ವೀಕ್ಷಕರಲ್ಲಿ ಅದರಲ್ಲೂ ಅಗ್ನಿಸಾಕ್ಷಿ ಧಾರಾವಾಹಿಯ ಅಭಿಮಾನಿಗಳಲ್ಲಿ ಸಂತಸ ಮೂಡುವಂತೆ ಮಾಡಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ