ಸಾಮಾನ್ಯವಾಗಿ ನಿರ್ದೇಶನ ಎಂದಾಕ್ಷಣ ಎಲ್ಲರ ಮನಸ್ಸಿಗೆ ಪುರುಷ ನಿರ್ದೇಶಕರು ನಿರ್ಮಾಪಕರು ನೆನಪಿಗೆ ಬರುತ್ತಾರೆ. ಆದರೆ ಕನ್ನಡದ ಕಿರುತೆರೆಯಲ್ಲಿ ಬಹಳ ಧಾರವಾಹಿಗಳನ್ನು ನಿರ್ದೇಶಿಸಿ ನಿರ್ಮಾಪಕಿಯಾಗಿ ಮಿಂಚುತ್ತಿರುವ ಸ್ವಪ್ನ ಕೃಷ್ಣ ಅವರ ಬಗ್ಗೆ ನಿಮಗೆ ತಿಳಿದಿರಬಹುದು. ಮಹಿಳಾ ನಿರ್ದೇಶಕಿ ಎಂದ ಕ್ಷಣ ನೆನಪಿಗೆ ಬರುವುದು ಶ್ರುತಿ ನಾಯ್ಡು. ಈಗ ಆ ಸಾಲಿಗೆ ಸೇರಿರುವ ನಟಿ ಸ್ವಪ್ನ ಕೃಷ್ಣ ಹಲವಾರು ಧಾರವಾಹಿಗಳಲ್ಲಿ ನಟಿಸಿದ್ದು ಅಲ್ಲದೆ ಇದೀಗ ನಿರ್ದೇಶಿಸಿ ನಿರ್ಮಾಪಕಿಯೂ ಆಗಿದ್ದಾರೆ.

ಸದ್ಯಕ್ಕೆ ಸತ್ಯ ಧಾರಾವಾಹಿಯ ನಿರ್ದೇಶನ ಹಾಗೂ ನಿರ್ಮಾಪಣೆಯಲ್ಲಿ ಬಿಜಿಯಾಗಿರುವ ಈಕೆ ಮೊದಲು ಫಣಿ ರಾಮಚಂದ್ರ ಅವರ ನಿರ್ದೇಶನದ ದಂಡಪಿಂಡಗಳು ಧಾರವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು. ನಂತರ ತುಳಸಿ, ವಾತ್ಸಲ್ಯ, ಮನೆ ಒಂದು ಮೂರು ಬಾಗಿಲು, ರಾಧಾ, ಬಂಗಾರ, ಮೀರಾ ಮಾಧವ, ಸಪ್ತಪದಿ ಸೇರಿದಂತೆ ಹಲವು ಧಾರವಾಹಿಗಳಲ್ಲಿ ನಟಿಸಿ ಖ್ಯಾತಿ ಪಡೆದರು. ನಂತರ ಕ್ಯಾಮೆರಾ ಮ್ಯಾನ್ ಕೃಷ್ಣ ಅವರನ್ನು ವರಿಸಿ ಇದೀಗ ಪತಿಯ ಸಲಹೆಯ ಮೇರೆಗೆ ನಿರ್ಮಾಪಕರಾಗಿ ನಿರ್ದೇಶಕಿಯಾಗಿ ಒಳ್ಳೊಳ್ಳೆಯ ಕಥೆಗಳನ್ನು ಪ್ರೇಕ್ಷಕರಿಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಅಂದ ಹಾಗೆ ಕ್ಯಾಮೆರಾಮನ್ ಕೃಷ್ಣ ಅವರನ್ನು ಸ್ವಪ್ನ ಅವರು ಸಪ್ತಪದಿ ಧಾರಾವಾಹಿಯಲ್ಲಿ ಭೇಟಿಯಾಗಿ ನಂತರ ಸ್ನೇಹಕ್ಕೆ ತಿರುಗಿ ಪ್ರೀತಿ ಮೂಡಿ ಮದುವೆಯಾದರು. ಇದೀಗ ಸ್ವಪ್ನ ಕೃಷ್ಣ ಆಗಿರುವ ಇವರು ಮೊದಲು ಗೃಹಲಕ್ಷ್ಮಿ ಧಾರವಾಹಿಯನ್ನು ನಿರ್ದೇಶಿಸುವ ಮೂಲಕ ಒಳ್ಳೆಯ ಕಥೆಯನ್ನು ಹೇಳಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದರು.

ನಂತರ ಸುಬ್ಬಲಕ್ಷ್ಮಿ ಸಂಸಾರ ಧಾರವಾಹಿಯ ಮೂಲಕ ಗಂಡ ಮನೆ ಮಕ್ಕಳು ಸಂಸಾರ ಎಂದು ತನ್ನೆಲ್ಲ ಸರ್ವಸ್ವವನ್ನೇ ಜಾಗ ಮಾಡುವ ಮುಗ್ಧ ಹೆಣ್ಣೊಬ್ಬಳ ಕಥೆಯನ್ನು ಅದ್ಭುತವಾಗಿ ಹೆಣೆದರು. ಮುಂದೆಚಗಂಗಾ ಧಾರವಾಹಿಗಳನ್ನು ನಿರ್ದೇಶಿಸಿ ಉತ್ತರ ಕರ್ನಾಟಕದ ಕಡೆ ಇರುವ ಕೆಲವು ಮೌಢ್ಯಗಳ ಬಗ್ಗೆ ಹಾಗೆಯೇ ಶಿಕ್ಷಣದ ಮಹತ್ವದ ಬಗ್ಗೆ ಪ್ರೇಕ್ಷಕರಿಗೆ ಮನಮುಟ್ಟುವಂತೆ ತೋರಿಸುವಲ್ಲಿ ಯಶಸ್ವಿಯಾದರು.

ಈ ರೀತಿ ಪ್ರೇಕ್ಷಕರಿಗೆ ವಿಭಿನ್ನ ಕಥೆಗಳನ್ನು ಹೇಳಿ ರಂಜಿಸುತ್ತಾ ಬಂದಿರುವ ಸ್ವಪ್ನ ಕೃಷ್ಣ ಸದ್ಯಕ್ಕೆ ಸತ್ಯಧಾರವಾಹಿ ಮೂಲಕ ಕಿರುತೆರೆ ಪ್ರಿಯರ ಮನೆಗೆದ್ದಿದ್ದಾರೆ. ವಿಭಿನ್ನ ಕಥೆಗಳನ್ನು ವಿಶೇಷವಾಗಿ ಹೇಳುವ ಇವರ ನಿರ್ದೇಶನದ ವೈಖರಿಯನ್ನು ಹಲವಾರು ಪ್ರೇಕ್ಷಕರು ಮೆಚ್ಚಿದ್ದಾರೆ, ಸತ್ಯ ಕೂಡ ಅಂಥದ್ದೆ ಒಂದು ವಿಭಿನ್ನ ಕಥೆ ಹೊಂದಿರುವುದು ಹೌದು! ಹಾಗೆಯೇ ಈ ಧಾರಾವಾಹಿ ಸ್ವಪ್ನ ಕೃಷ್ಣ ಅವರಿಗೆ ಬಹಳಷ್ಟು ಜನಪ್ರಿಯತೆಯನ್ನು ತಂದು ಕೊಟ್ಟಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ