ಸಾಮಾನ್ಯವಾಗಿ ಎಲ್ಲೆಡೆಯೂ ಬಲಗೈ ಬಳಸುವವರಿಗೆ ಅನುಕೂಲಕರವಾಗಿ ವ್ಯವಸ್ಥೆಗಳಿರುತ್ತದೆ. ಅದೇ ಎಡಗೈ ಮುಂದಿರುವವರು ಏನೆಲ್ಲಾ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಎಂಬುದೇ “ಎಡಗೈ ಅಪಘಾತಕ್ಕೆ ಕಾರಣ” ಚಿತ್ರದ ಕಥಾ ಹಂದರ.

ದೂದ್ ಪೇಡ ದಿಗಂತ್ ಅವರ ನಾಯಕತ್ವದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಮೂರು ಹೀರೋಯಿನ್ ಗಳಿದ್ದು ಅದರಲ್ಲಿ ರಾಧಿಕಾ ನಾರಾಯಣ್ ಕೂಡ ಒಬ್ಬರು. ರಾಧಿಕಾ ನಾರಾಯಣ್ ಹೊರತಾಗಿ ಧನು ಹರ್ಷ ಹಾಗೂ ನಿಧಿ ಸುಬ್ಬಯ್ಯ ಕೂಡ ಮುಖ್ಯಪಾತ್ರಗಳನ್ನು ಮಾಡಲಿದ್ದಾರೆ.

ಮೊದಲಿನಿಂದಲೂ ನಟಿ ರಾಧಿಕಾ ನಾರಾಯಣ್ ಅವರು ಕೇವಲ ವಿಶೇಷ ಚಿತ್ರಗಳಲ್ಲಿ ಮಾತ್ರವಲ್ಲ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡೇ ಫೇಮಸ್ಸು. ರಂಗಿತರಂಗ, ಯೂಟರ್ನ್ ಇತ್ಯಾದಿ ಚಿತ್ರಗಳ ಮೂಲಕ ತಮ್ಮ ನಟನೆಯ ವೈಖರಿಯನ್ನು ಪ್ರೇಕ್ಷಕರಿಗೆ ತೋರಿಸಿ ಮೆಚ್ಚುಗೆ ಪಡೆದಿರುವ ನಟಿ ರಾಧಿಕಾ ನಾರಾಯಣ್ ಇದೀಗ ಈ ಚಿತ್ರವನ್ನು ಆಯ್ದುಕೊಂಡಿರುವುದು ವಿಶೇಷ.

ಈ ಬಗ್ಗೆ ಮಾತನಾಡಿರುವ ಆಕೆ ” ಈ ಚಿತ್ರ ಚಿತ್ರಕಥೆ ಹಾಗೂ ಇದರ ತಂಡ ಬಹಳ ವಿಶೇಷವಾದದ್ದು. ಇದುವರೆಗೂ ಈ ರೀತಿಯ ಚಿತ್ರಕಥೆಯನ್ನು ಯಾರು ತೆಗೆದುಕೊಂಡಿಲ್ಲ. ಇದೊಂದು ಹೊಸ ರೀತಿಯ ಕಥೆಯನ್ನು ಹೇಳ ಹೊರೆಟಿದೆ. ಅಲ್ಲದೆ ಈ ಇಡೀ ಚಿತ್ರತಂಡ ಬಹಳ ಕಂಫರ್ಟೆಬಲ್ ಆಗಿದೆ. ಅದರಲ್ಲೂ ಕ್ಯಾಮೆರಾಮೆನ್ ಆಗಿರುವ ಅಭಿಮನ್ಯು ಸದಾನಂದ ಅವರ ಬಗ್ಗೆ ನನಗೆ ವಿಶೇಷ ಅಭಿಮಾನ ಇದೆ. ಮೊದಲಿನಿಂದಲೂ ಅವರ ಕೆಲಸಗಳನ್ನು ನೋಡಿಕೊಂಡು ಬಂದಿದ್ದೇನೆ. ನನಗೆ ಅವರ ಕಾರ್ಯ ವೈಕರಿ ತುಂಬಾ ಇಷ್ಟ. ಅಲ್ಲದೆ ದೂದ್ ಪೇಡ ದಿಗಂತ್ ಕೂಡ ಅಷ್ಟೇ ಕಂಫರ್ಟೆಬಲ್ ನಟ” ಎಂದು ಹೇಳುತ್ತಾ ಚಿತ್ರತಂಡದ ಬಗೆಗಿನ ತಮ್ಮ ಸಂತಸ ಹಾಗೂ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

“ಪಾತ್ರ ಎಂತದ್ದೇ ಇರಲಿ ನಮ್ಮ ಸುತ್ತ ಕಂಫರ್ಟ್ ಇಲ್ಲ ಎಂದಾದರೆ ಯಾವುದೇ ಪಾತ್ರಕ್ಕೆ ಜೀವ ಕೊಡಲು ಸಾಧ್ಯವಿಲ್ಲ. ಹಾಗಾಗಿ ನಾನು ಯಾವುದೇ ಸಿನಿಮಾಗೂ ಒಪ್ಪುವ ಮೊದಲು ನನಗೆ ಅದರಿಂದ ಕಂಫರ್ಟ್ ಜೋನ್ ಸಿಗುವುದೇ ಎಂದು ಯೋಚಿಸುತ್ತೇನೆ. ” ಎಂದಿದ್ದಾರೆ.

ನಿರ್ದೇಶಕ ಸಮರ್ಥ ಕೊಳಕೋಡ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ “ಎಡಗೈ ಅಪಘಾತಕ್ಕೆ ಕಾರಣ” ಚಿತ್ರ ಬಹಳ ವಿಶಿಷ್ಟ ಕಥಾ ಹಂದರ ಹೊಂದಿದೆ. ಡಾರ್ಕ್ ಹ್ಯೂಮರ್ ಒಳಗೊಂಡಿರುವ ಈ ಚಿತ್ರದ ಹೇಗೆ ಮೂಡಿ ಬರುತ್ತದೆ, ಪ್ರೇಕ್ಷಕರು ಇದನ್ನು ಯಾವ ರೀತಿ ಒಪ್ಪಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ