ನಿರ್ದೇಶಕ ಶಂಕರ್ ಕೋನಮಾನಹಳ್ಳಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಿಂಗೋ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಲಿದ್ದಾರೆ ನಟಿ ರಾಗಿಣಿ ದ್ವಿವೇದಿ. ಆರ್ ಕೆ ಸ್ಟುಡಿಯೋಸ್ ಹಾಗೂ ಮುತಾರವೆಂಚರ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಆರ್ ಪರಂಕುಶ ಹಾಗೂ ಲಲಿತ ಸ್ವಾಮಿ ನಿರ್ಮಾಪಕರಾಗಿದ್ದಾರೆ.

ಚಿತ್ರದ ಮುಹೂರ್ತ ಸಮಾರಂಭ ನಾಗರಬಾವಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇತ್ತೀಚೆಗಷ್ಟೇ ನೆರವೇರಿತು. ಚಿತ್ರದಲ್ಲಿ ನಟ ಆರ್ ಕೆ ಚಂದನ್ ಹಾಗೂ ನಟಿ ರಕ್ಷಾ ನಿಮ್ಬರ್ಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರೆ, ರಾಗಿಣಿ ದ್ವಿವೇದಿಯವರು ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರಂತೆ.

ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು ನಟ ವಸಿಷ್ಠ ಸಿಂಹ ಮೊದಲ ಸೀನ್ ಗೆ ಆರಂಭ ಫಲಕ ತೋರಿದ್ದಾರೆ. ಮುಹೂರ್ತದ ಸಂದರ್ಭದಲ್ಲಿ ಸಚಿವ ವಿ ಸೋಮಣ್ಣ ಅವರು ಕ್ಯಾಮರಾ ಗೆ ಚಾಲನೆ ನೀಡಿದ್ದಾರೆ.

ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಶಂಕರ್ ತಮ್ಮ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ “ಬಿಂಗೂ ಪದಕ್ಕೆ ಬಹಳಷ್ಟು ಅರ್ಥಗಳಿವೆ. ಈ ಚಿತ್ರದಲ್ಲಿ ಮುಖ್ಯವಾಗಿ ಆರು ಪಾತ್ರಗಳಿದ್ದು ಅದರಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ನಟಿ ರಾಗಿಣಿ ದ್ವಿವೇದಿ ಅವರು ನಿರ್ವಹಿಸಲಿದ್ದಾರೆ. ಎಲ್ಲಾ ಚಿತ್ರೀಕರಣವು ಬೆಂಗಳೂರಿನಲ್ಲೇ ನಡೆಯಲಿದೆ.

ಇದೊಂದು ಹೊಸ ರೀತಿಯ ಚಿತ್ರವಾಗಿದ್ದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ. ಕಲಾವಿದರಾದ ರಾಜೇಶ್ ನಟರಂಗ, ಪವನ್, ಮುರಳಿ ಪೂರ್ವಿಕ್, ಅಪೂರ್ವ, ಆಶಾ ಸುಜಯ್, ಶ್ರವಣ್, ವಿದ್ಯಾ, ಕುಮಾರ್ ಮುಂತಾದ ಕಲಾವಿದರು “ಬಿಂಗೊ” ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ಇದಕ್ಕಿಂತ ಹೆಚ್ಚೇನು ಹೇಳಲ್ಲ ಸಾಧ್ಯವಿಲ್ಲ ಮುಂದಿನ ಅಪ್ಡೇಟ್ ಗಾಗಿ ಕಾಯುತ್ತಿರಿ” ಎಂದಿದ್ದಾರೆ.

ಇದು ನಿರ್ದೇಶಕ ಶಂಕರ್ ಅವರ ಎರಡನೇ ಚಿತ್ರವಾಗಿದ್ದು ಮೊದಲನೇ ಚಿತ್ರ “ಶಂಭೋ ಶಿವ ಶಂಕರ” ಸದ್ಯದಲ್ಲೇ ಬಿಡುಗಡೆಯಾಗಲಿದೆ. ಇನ್ನು ಚಿತ್ರದ ಬಗ್ಗೆ ಮಾತನಾಡಿರುವ ನಟಿ ರಾಗಿಣಿ ದ್ವಿವೇದಿ “ಚಿತ್ರಕಥೆ ಬಹಳ ವಿಶೇಷವಾಗಿದೆ ಹಾಗೂ ನನಗೆ ಸಿಕ್ಕಿರುವ ಪಾತ್ರವಂತೂ ತುಂಬಾ ಹಿಡಿಸಿತು ಹಾಗಾಗಿ ಒಪ್ಪಿಕೊಂಡೆ. ನಾನು ಈವರೆಗೆ ಮಾಡಿರದ ಪಾತ್ರ ಇದಾಗಿದೆ. ಇದಕ್ಕಿಂತ ಹೆಚ್ಚು ಪಾತ್ರದ ಬಗ್ಗೆ ಏನು ಹೇಳಲು ಸಾಧ್ಯಕ್ಕೆ ಸಾಧ್ಯವಿಲ್ಲ” ಎಂದಿದ್ದಾರೆ. ಬಿಂಗೊ ಎಂಬ ಹೆಸರೇ ವಿಶೇಷವಾಗಿದೆ, ಕಥೆಯು ವಿಶೇಷವಾಗಿದೆ ಎಂದು ತಂಡ ಹೇಳುತ್ತಿದೆ. ಹಾಗಾಗಿ ಚಿತ್ರ ಹೇಗೆ ಮೂಡಿ ಬರುತ್ತದೆ ಎಂದು ಕಾದು ನೋಡಬೇಕಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ