ಕನ್ನಡದ ಓಂ ಚಿತ್ರ ಖ್ಯಾತಿಯ ನಟಿ ಮುದ್ದುಮುಖದ ಪ್ರೇಮ ಯಾರಿಗೆ ಗೊತ್ತಿಲ್ಲ ಹೇಳಿ? ತಮ್ಮ ಅದ್ಭುತ ನಟನೆಯ ಮೂಲಕವೇ ಇಡೀ ಚಿತ್ರರಂಗವನ್ನು ಅಭಿಮಾನಿಗಳನ್ನು ಪ್ರೇಕ್ಷಕರನ್ನು ಮೋಡಿ ಮಾಡಿದ ಕೊಡಗಿನ ಈ ಚೆಲುವೆ, ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡು ನಡುವೆ ಒಂದು ಬ್ರೇಕ್ ತೆಗೆದುಕೊಂಡು ಈಗ ಮತ್ತೆ ಸಿನಿ ರಂಗಕ್ಕೆ ವಾಪಸ್ ಆಗಿರುವುದು ಖುಷಿಯ ವಿಚಾರ.

1995ರಲ್ಲಿ “ಸವ್ಯಸಾಚಿ” ಎಂಬ ಸಿನಿಮಾದಲ್ಲಿ ಮೊದಲ ಬಾರಿಗೆ ಪ್ರೇಮ ಅವರು ನಟಿಸಿದ್ದರು. ಅದಾದ ಮೇಲೆ ಕನ್ನಡದ ನಟ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿ ಬಂದ “ಓಂ” ಚಿತ್ರಕ್ಕೆ ಶಿವರಾಜ್ ಕುಮಾರ್ ಅವರ ಜೊತೆ ನಟಿಸಿ ಎಲ್ಲರ ಮನ ಗೆದ್ದರೂ ನಟಿ ಪ್ರೇಮ.

ಆ ಕಾಲಕ್ಕೆ ಬಹಳಷ್ಟು ಸೆನ್ಸೇಷನ್ ಮೂಡಿಸಿದ ಚಿತ್ರ ಓಂ, ಅಂದಿನಿಂದ ಇಂದಿನವರೆಗೂ ವಿಶೇಷವಾಗಿಯೇ ಇದೆ. ಓಂ ಚಿತ್ರದ ಖ್ಯಾತಿಯ ನಂತರ ಬಹಳಷ್ಟು ಸೂಪರ್ ಸ್ಟಾರ್ಗಳ ಜೊತೆ ನಟಿಸುವ ಅವಕಾಶ ನಟಿ ಪ್ರೇಮ ಅವರಿಗೆ ಸಿಕ್ಕಿತು. ಕನ್ನಡ ಚಿತ್ರರಂಗವಷ್ಟೇ ಅಲ್ಲದೆ ತೆಲುಗು ಸಿನಿರಂಗ ಕೂಡ ಪ್ರೇಮ ಅವರನ್ನು ಕೈಬೀಸಿ ಕರೆಯಿತು.

ಹೀಗೆ ವರ್ಷಗಳ ಕಾಲ ಹಲವಾರು ಚಿತ್ರಗಳಲ್ಲಿ ನಟಿಸುತ್ತಾ ಇದ್ದ ಪ್ರೇಮ ನಟನೆಯ ಉತ್ತುಂಗ ಸ್ಥಾನದಲ್ಲಿರುವಾಗಲೇ ಮದುವೆಯಾಗಿ ಪ್ರೇಕ್ಷಕರಿಗೆ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದರು. 2006ರಲ್ಲಿ ಜೀವನ್ ಅಪ್ಪಚ್ಚು ಎಂಬುವವರನ್ನು ಅದ್ದೂರಿಯಾಗಿ ಮದುವೆಯಾದ ಪ್ರೇಮ, ನಂತರ ಕೆಲ ವರ್ಷಗಳ ಕಾಲ ಸಿನಿ ರಂಗದಿಂದ ಹೊರಗೆ ಉಳಿದರು. ಮದುವೆಯ 10 ವರ್ಷದ ಬಳಿಕ ಅಂದರೆ 2016ರಲ್ಲಿ ವಿಚ್ಛೇದನವನ್ನು ಪಡೆದರು.

ತಮ್ಮ ವೈವಾಹಿಕ ಜೀವನದ ಬಗ್ಗೆ ಕೇಳಿದ್ದಕ್ಕೆ, “ಅದೊಂದು ಕಳೆದು ಹೋದ ಅಧ್ಯಾಯ. ನನ್ನ ಬದುಕಿನ ಒಂದು ಭಾಗವಷ್ಟೇ. ಮದುವೆಯಾದ ಮೇಲೆ ವೈವಾಹಿಕ ಜೀವನ ಅಷ್ಟು ಕಂಫರ್ಟ್ ಎಂದೆನಿಸಲಿಲ್ಲ ಹಾಗಾಗಿ ವಿಚ್ಛೇದನ ಪಡೆದೆವು. ಅದಕ್ಕೆ ಹೆಚ್ಚೇನು ಪ್ರಾಮುಖ್ಯತೆಯನ್ನು ಕೊಡಲು ಇಷ್ಟಪಡುವುದಿಲ್ಲ.” ಎಂದಷ್ಟೇ ಹೇಳಿದ್ದಾರೆ.

ಈ ಮೊದಲು ಟಿವಿ9 ಒಮ್ಮೆ ಪ್ರೇಮ ಅವರ ವೈವಾಹಿಕ ಜೀವನದ ಬಗ್ಗೆ ಒಂದಷ್ಟು ಸ್ಟೋರೀಸ್ ಅನ್ನು ನೀಡಿತ್ತು. ವೀಕೆಂಡ್ ವಿತ್ ರಮೇಶ್ ಗೆ ಬಂದಾಗಲೂ ಪ್ರೇಮ ಅವರು ತಮ್ಮ ವೈಯಕ್ತಿಕ ವೈವಾಹಿಕ ಜೀವನದ ಬಗ್ಗೆ ಹೆಚ್ಚು ಹೇಳಲು ಇಷ್ಟಪಟ್ಟಿರಲಿಲ್ಲ.

“ಯಾವುದೇ ಆಗಲಿ ಸರಿಯಾಗಿಲ್ಲ ಎಂದರೆ ಹೊರಬರುವಷ್ಟು ಕಾನ್ಫಿಡೆನ್ಸ್ ಧೈರ್ಯ ಮಹಿಳೆಯರಿಗೆ ಇರಬೇಕು. ನಾನು ವಿಚ್ಛೇದನ ಪಡೆಯುತ್ತಿದ್ದೇನೆ ಎಂದಾಗ ನನ್ನ ತಂದೆ ತಾಯಿ ನನಗೆ ಬೆನ್ನೆಲುಬಾಗಿ ನಿಂತರು. ಆ ಮಟ್ಟಿನಲ್ಲಿ ನಾನು ಅದೃಷ್ಟವಂತೆ. ಈಗ ಹಿಂದೆ ತಿರುಗಿ ನೋಡಿದರೆ ನಾನು ಅಂದು ತೆಗೆದುಕೊಂಡ ನಿರ್ಧಾರ ಸರಿಯಾಗಿದೆ ಎಂಬ ಸಮಾಧಾನವಿದೆ” ಎಂದರು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ