“ಈ ಮೊದಲು ಎಲ್ಲಾ ಹೋಮ್ಲಿ ಪಾತ್ರಗಳನ್ನು ಮಾಡಿರುವ ನನಗೆ ಈ ಚಿತ್ರದಲ್ಲಿ ಬೋಲ್ಡ್ ಪಾತ್ರ ಸಿಕ್ಕಿರುವುದು ಖುಷಿ ಇದೆ. ಪ್ರೇಕ್ಷಕರು ಅದನ್ನು ಹೇಗೆ ಒಪ್ಪಿಕೊಳ್ಳುತ್ತಾರೋ ಎಂಬ ಕುತೂಹಲವೂ ಇದೆ. ದಿಲ್ ಪಸಂದ್ ಚಿತ್ರದಲ್ಲಿ ಮಾಡಿರುವ ಪಾತ್ರ ನನ್ನ ನಿಜ ಜೀವನದ ಸ್ವಭಾವಕ್ಕೆ ಬಹಳಷ್ಟು ವ್ಯಕ್ತಿರಿಕ್ತವಾದದ್ದು” ಎಂದು ದಿಲ್ ಪಸಂದ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ ನಟಿ ನಿಶ್ವಿಕಾ ನಾಯ್ಡು.

ಡಾರ್ಲಿಂಗ್ ಕೃಷ್ಣ, ಮೇಘಾ ಶೆಟ್ಟಿ ಜೊತೆ ದಿಲ್ ಪಸಂದ್ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ನಿಶ್ವಿಕಾ ನಾಯ್ಡು “ತಮಗೆ ಲವ್ ಸ್ಟೋರಿ ಬೇಸ್ಡ್ ಚಿತ್ರಗಳೇ ಅಚ್ಚುಮೆಚ್ಚು” ಎಂದಿದ್ದಾರೆ. ನಿರ್ದೇಶಕ ಶಿವ ತೇಜಸ್ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ. ಲವ್ ಟ್ರಯಾಂಗಲ್ ಕಥಾ ಹಂದರದ ಚಿತ್ರ ಇದಾಗಿದ್ದು ಈ ಬಗ್ಗೆ ತಮ್ಮ ಅನಿಸಿಕೆ ಹೇಳಿದ್ದಾರೆ ನಟಿ ನಿಶ್ವಿಕಾ ನಾಯ್ಡು.

“ಲವ್ ಸ್ಟೋರಿ ಆದರೆ, ಹೆಚ್ಚು ಅಟೆನ್ಷನ್ ಸಿಗುತ್ತೆ. ಹೆಚ್ಚು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ ಪಾತ್ರಗಳು ಯಾವಾಗಲೂ ನಮ್ಮ ವ್ಯಕ್ತಿತ್ವಕ್ಕೆ ಸ್ಫೂರ್ತಿ ನೀಡುತ್ತವೆ. ಅಂತಹ ಸ್ಕ್ರಿಪ್ಟ್‌ಗಳಿಗೆ ಹೆಚ್ಚಿನ ಸ್ಕ್ರೀನ್ ಶೇರಿಂಗ್ ಅವಕಾಶವಿರುತ್ತದೆ. ಚಿತ್ರದಲ್ಲಿ ನಾನು ಐಶ್ವರ್ಯ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ” ಎಂದಿದ್ದಾರೆ.

ಇದರ ಜೊತೆಗೆ “ಸಿನಿಮಾದಲ್ಲಿ ಕಂಡುಬರುವ ಐಶ್ವರ್ಯಾ ಅವರಂತಹ ಜನರು ನಮ್ಮ ಸಮಾಜದಲ್ಲಿದ್ದಾರೆ. ಐಶ್ವರ್ಯಾ ಈ ರೀತಿಯಲ್ಲಿ ವರ್ತಿಸಲು ಒಂದು ಕಾರಣವಿದೆ ಮತ್ತು ಆಕೆ ತನ್ನ ದೌರ್ಬಲ್ಯವನ್ನು ತೋರಿಸಲು ಇಷ್ಟಪಡುವುದಿಲ್ಲ. ಉದ್ಧಟತನದಿಂದ ಮತ್ತು ದುರಹಂಕಾರದಿಂದ ವರ್ತಿಸುವ ಆಕೆಯ ನಿಜವಾದ ಭಾವನೆಗಳೇನು? ಎಂಬುದು ಚಿತ್ರ ನೋಡಿಯೇ ತಿಳಿಯಬೇಕು. ಹಲವಾರು ಜನ ತಮ್ಮ ನಿಜವಾದ ಭಾವನೆಗಳನ್ನು ಮುಚ್ಚಿಟ್ಟು ಬದುಕುತ್ತಾರೆ, ಅದಕ್ಕೆ ಅವರದ್ದೇ ಆದ ಕಾರಣಗಳಿರುತ್ತವೆ, ಅಲ್ವಾ? ಅಂಥದ್ದೇ ಒಂದು ಪಾತ್ರ ಇದು” ಎನ್ನುತ್ತಾರೆ.

ನವೆಂಬರ್ 11ರಂದು ಚಿತ್ರ ಬಿಡುಗಡೆಯಾಗಿದ್ದು, ಒಳ್ಳೆಯ ಅಭಿಪ್ರಾಯ ಬರುತ್ತಿದೆ. ಇನ್ನು ಹೇಗಿದೆ ಏನೆಂಬುದನ್ನು ಥಿಯೇಟರ್ ಗೆ ಹೋಗಿಯೇ ನೋಡಬೇಕಿದೆ.

ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ