ಹಿಂದಿಯ ಶಕ ಲಕ ಬೂಮ್ ಬೂಮ್ ಧಾರಾವಾಹಿಯ ಮೂಲಕ ತನ್ನ ನಟನಾ ಕೆರಿಯರ್ ಆರಂಭಿಸಿದ ನಟಿ ಹನ್ಸಿಕಾ ಮೊಟ್ವಾನಿ ತಮ್ಮ ಹದಿನೈದನೇ ವಯಸ್ಸಿನಲ್ಲೇ ತೆಲುಗಿನ ಅಲ್ಲು ಅರ್ಜುನ್ ಅಭಿನಯದ, ಪೂರಿ ಜಗನ್ನಾಥ್ ನಿರ್ದೇಶನದ ‘ದೇಶಮುದುರು’ ಚಿತ್ರದಲ್ಲಿ ನಟಿಸಿ ಪೂರ್ಣ ಪ್ರಮಾಣದ ನಾಯಕಿಯಾಗಿ ಮಿಂಚಿದ್ದರು.

ನಂತರ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಚಿತ್ರಗಳಲ್ಲಿಯೂ ಅಭಿನಯಿಸಿ ಸೈ ಎನಿಸಿಕೊಂಡರು. ಬಾಲನಟಿಯಾಗಿ ಅಭಿನಯಿಸಿದ ಚಿತ್ರಗಳೂ ಸೇರಿದಂತೆ ಸುಮಾರು ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹನ್ಸಿಕಾ ಮೊಟ್ವಾನಿ ಕಳೆದೆರಡು ವರ್ಷಗಳಿಂದ ಸಿನಿ ಕ್ಷೇತ್ರದಿಂದ ದೂರ ಉಳಿದಿದ್ದರು. ಈಗ ಈ ವರ್ಷ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ.

‘ಮಹಾ’ ಎಂಬ ತಮಿಳು ಚಿತ್ರದಲ್ಲಿ ನಟಿಸುವ ಮೂಲಕ ತಮ್ಮ ವೃತ್ತಿ ಜೀವನದ ಐವತ್ತು ಚಿತ್ರಗಳನ್ನು ಪೂರೈಸಿ, ಮೈಲಿಗಲ್ಲನ್ನು ನೆಟ್ಟಿದ್ದಾರೆ ನಟಿ ಹನ್ಸಿಕಾ ಮೊಟ್ವಾನಿ. ಇವರ ಮದುವೆ ಕುರಿತು ಕಳೆದ ಕೆಲ ದಿನಗಳಿಂದ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ಆಕೆಯೇ ಕ್ಲಾರಿಟಿ ನೀಡಿದ್ದಾರೆ.

ನಟಿ ಹನ್ಸಿಕಾ ಜತೆ ಸಪ್ತಪದಿ ತುಳಿಯಲಿರುವುದು ಅವರ ಬಹುದಿನಗಳ ಗೆಳೆಯ ಹಾಗೂ ಬ್ಯುಸಿನೆಸ್ ಪಾರ್ಟ್ನರ್ ಸೋಹೈಲ್ ಕಥುರಿಯಾ ಜತೆ. ಹೌದು, ಬ್ಯುಸಿನೆನ್‌ಮನ್ ಆಗಿರುವ ಸೋಹೈಲ್ ಕಥುರಿಯಾ ಹನ್ಸಿಕಾ ಮೊಟ್ವಾನಿ ಅವರೊಂದಿಗೆ ಹಲವು ಕಂಪನಿಯ ಪಾರ್ಟ್ನರ್ ಆಗಿದ್ದರು. ಈಗ ಜೀವನದ ಪಾರ್ಟ್ನರ್ ಆಗಲು ನಿರ್ಧರಿಸಿದ್ದಾರೆ.

ಹನ್ಸಿಕಾ ಮೊಟ್ವಾನಿ ತಮ್ಮ ಹಲವು ದಿನಗಳ ಗೆಳೆಯನ ಜೊತೆ ವೈವಾಹಿಕ ಜೀವನವನ್ನು ಶುರು ಮಾಡುವುದನ್ನು ಸೂಚ್ಯವಾಗಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ಯಾರಿಸ್‌ನ ಎಫೆಲ್ ಟವರ್ ಮುಂದೆ ಸೋಹೈಲ್ ಕಥುರಿಯಾ ಮಂಡಿಯೂರಿ ಪ್ರಪೋಸ್ ಮಾಡಿರುವ ಚಿತ್ರವನ್ನು ನಟಿ ಹನ್ಸಿಕಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ‘ ನವ್ ಎಂಡ್ ಫಾರೆವರ್’ ಎಂದು ಬರೆದುಕೊಂಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಬಿಂದಾಸ್ ಚಿತ್ರದಲ್ಲಿ ನಟಿಸಿದ್ದ ಹನ್ಸಿಕಾ ಮೊಟ್ವಾನಿ ನಟಿಸಿದ್ದರು. ಇದೀಗ ಸೋಹೈಲ್ ಕಥುರಿಯಾ ಜತೆ ಇದೇ ವರ್ಷದ ಡಿಸೆಂಬರ್ನಲ್ಲಿ ಮದುವೆಯಾಗಲಿದ್ದಾರೆ.