ಹಲವಷ್ಟು ದಿನಗಳಿಂದ ಇದ್ದ ಗಾಳಿಸುದ್ದಿಗೆ ಇದೀಗ ಬ್ರೇಕ್ ತರುವ ಸಮಯ.ಬಬಹಳಷ್ಟು ದಿನಗಳಿಂದ ನಟ ಶಿವರಾಜ್ ಕುಮಾರ್ ಅವರು ತಮಿಳು ಚಿತ್ರದಲ್ಲಿ ನಟಿಸುತ್ತಾರೆ ಎಂಬ ಗಾಳಿಸುದ್ದಿ ಹರಿದಾಡುತ್ತಿತ್ತು. ಇದೀಗ ಈ ಅಂಶವು ಸತ್ಯ ಎಂದು ತಿಳಿದಿದ್ದು ನಟ ಡಾಕ್ಟರ್ ಶಿವರಾಜ್ ಕುಮಾರ್ ಅವರು ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜೈಲರ್ ಎಂಬ ರಜನಿಕಾಂತ್ ನಟನೆಯ ತಮಿಳು ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರು ನಟಿಸುತ್ತಿರುವುದನ್ನು ಚಿತ್ರದ ನಿರ್ಮಾಣ ಸಂಸ್ಥೆಯಾದ ಸನ್ ಪಿಚ್ಚರ್ ಅಧಿಕೃತವಾಗಿ ಟ್ವಿಟರ್ ಮೂಲಕ ಅನೌನ್ಸ್ ಮಾಡಿದೆ. ಶಿವರಾಜ್ ಕುಮಾರ್ ಅವರ ಫೋಟೋವನ್ನು ಶೇರ್ ಮಾಡುವುದರ ಮೂಲಕ ಹಲವಷ್ಟು ದಿನದಿಂದ ಹರಿದಾಡುತ್ತಿದ್ದ ಈ ರೂಮರ್ ಸತ್ಯ ಎಂಬುದನ್ನು ಹೊರ ಹಾಕಿದೆ.

ಕನ್ನಡದಲ್ಲಿ ನೂರಾರು ಚಿತ್ರಗಳನ್ನು ಮಾಡಿರುವ ನಟ ಡಾ.ಶಿವರಾಜಕುಮಾರ್ ಇದೇ ಮೊದಲ ಬಾರಿಗೆ ತಮಿಳು ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಮೊದಲು ಗೌತಮಿಪುತ್ರ ಶಾತಕರ್ಣಿ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅದು ಬಿಟ್ಟರೆ ಡಾಕ್ಟರ್ ಶಿವರಾಜ್ ಕುಮಾರ್ ಅವರ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ತಮಿಳು ಚಿತ್ರದಲ್ಲಿ ಅದರಲ್ಲೂ ರಜನಿಕಾಂತ್ ಅವರು ನಟಿಸುತ್ತಿರುವ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಬಹಳ ವಿಶೇಷವಾಗಿದೆ.

ಈ ಮೂಲಕ ಚಿತ್ರದ ಬಗ್ಗೆ ಪ್ರೇಕ್ಷಕರ ಅಭಿಮಾನಿಗಳ ಕುತೂಹಲ ಕೆರಳಿಸಿದ್ದು, ಜೈಲರ್ ಚಿತ್ರವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಿದ್ದಾರೆ ಹಾಗೂ ಅನಿರುದ್ಧ ರವಿಚಂದರ್ ಇವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ