ತೆಲುಗು ಧಾರಾವಾಹಿ ಸೆಟ್ನಲ್ಲಿ ಚಂದನ್ ಕುಮಾರ್ ಮೇಲಿನ ಹಲ್ಲೆ ವಿಚಾರ ಸಿಕ್ಕಾಪಟ್ಟೆ ಸಂಚಲನ ಮೂಡಿಸುತ್ತಿರವ ಬೆನ್ನಲ್ಲೇ ಹೊಸ ವಿಚಾರವೊಂದು ಸಖತ್ ಸುದ್ದಿ ಮಾಡುತ್ತಿದೆ. ಚಂದನ್ ತೆಲುಗು ಸೀರಿಯಲ್ನಿಂದ ಹೊರ ಬರುವ ಮುಂಚೆನೇ ಅವರನ್ನ ಬ್ಯಾನ್ ಮಾಡಿದ್ರಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.
ಕನ್ನಡ ನಟ ಚಂದನ್ ಮೇಲೆ ಹಲ್ಲೆ ವಿಚಾರವಾಗಿ ಈಗಾಗಲೇ ಹಲವಾರು ಸುದ್ದಿಗಳು ಹರಿದಾಡಿದೆ. ಚಂದನ್ ಸಹ ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿ ಮಾಡದ ತಪ್ಪಿಗೆ ತನ್ನ ಮೇಲೆ ತೆಲುಗು ಸೀರಿಯಲ್ ಸೆಟ್ನಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ, ಈ ಕಾರಣದಿಂದ ನಾನು ಮತ್ತೆಂದೂ ತೆಲುಗಿನ ಸಿರೀಯಲ್ಗೆ ಹೋಗಲ್ಲ ಎಂದು ಚಂದನ್ ಹೇಳಿದ್ದರು. ಆದರೆ ಇದೀಗ ತೆಲುಗಿನ ಟಿಲಿವಿಶನ್ ಟೆಕ್ನೀಶಿಯನ್ಸ್ ಮತ್ತು ವರ್ಕರ್ಸ್ ಫೆಡರೇಶನ್ ಬರೆದಿರುವ ಪತ್ರವೊಂದು ವೈರಲ್ ಆಗಿದ್ದು, ಈ ಕಥೆಗೆ ಬೇರೆ ಟ್ವಿಸ್ಟ್ ಸಿಕ್ಕಿದೆ.