ಅಭಿನಯ ಚಕ್ರವರ್ತಿ, ಚಂದನವನದ ಬಾದ್ ಶಾ ಎಂದೇ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಕಿಚ್ಚ ಸುದೀಪ್ ಅವರಿಗೆ ಇದೀಗ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೋಲ್ಡನ್ ವೀಸಾ ದೊರಕಿದೆ. ಗೋಲ್ಡನ್ ವೀಸಾ ಪಡೆದ ಕನ್ನಡದ ಮೊದಲ ನಟ ಎಂಬ ಕೀರ್ತಿಗೆ ಕಿಚ್ಚ ಸುದೀಪ್ ಪಾತ್ರರಾಗಿದ್ದಾರೆ. ಮಾತ್ರವಲ್ಲ ಬಾಲಿವುಡ್ ನಟರಾದ ಶಾರುಖ್ ಖಾನ್, ರಣವೀರ್ ಸಿಂಗ್ ಮತ್ತು ಸಂಜಯ್ ದತ್ ಸಾಲಿಗೆ ಸುದೀಪ್ ಸೇರಿದ್ದು, ಈ ಸಂತಸದ ವಿಚಾರ ಕೇಳಿ ಸಿನಿಪ್ರಿಯರು, ಅದರಲ್ಲೂ ಕಿಚ್ಚನ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ.

ಅಂದ ಹಾಗೇ ಇದು 10 ವರ್ಷಗಳ ದೀರ್ಘಾವಧಿಯ ಗೋಲ್ಡನ್ ವೀಸಾ ಆಗಿದೆ. ಜೊತೆಗೆ ದುಬೈ ಮತ್ತು ಯುಎಇಯ ಇತರ ಆರು ಎಮಿರೇಟ್‌ಗಳಿಗೆ ಯಾವಾಗ ಬೇಕದರೂ ಭೇಟಿಯಾಗುವಂತಹ ಸುವರ್ಣಾವಕಾಶವನ್ನು ಕಿಚ್ಚ ಪಡೆದುಕೊಂಡಿದ್ದಾರೆ. ಈ ವೀಸಾವನ್ನು ಯುಎಇಯ ಆರ್ಥಿಕತೆಗೆ ಕೊಡುಗೆ ನೀಡಬಹುದಾದ ಪ್ರಸಿದ್ಧ ವ್ಯಕ್ತಿಗಳು, ಉದ್ಯಮಿಗಳು ಮತ್ತು ಇತರ ವರ್ಗದ ವಿದೇಶಿ ನಾಗರಿಕರಿಗೆ ಈ ವೀಸಾವನ್ನು ಒದಗಿಸಲಾಗುತ್ತದೆ.

ಯುಎಇ ಗೋಲ್ಡನ್ ವೀಸಾ ಹೊಂದಿರುವ ಇತರ ಭಾರತೀಯ ಸೆಲೆಬ್ರಿಟಿಗಳಲ್ಲಿ ಮೋಹನ್ ಲಾಲ್, ಮಮ್ಮುಟ್ಟಿ, ಸುನಿಲ್ ಶೆಟ್ಟಿ ಮತ್ತು ಸೋನು ನಿಗಮ್ ಸೇರಿದ್ದಾರೆ. ಇನ್ನು ಕೇವಲ ಭಾರತೀಯ ಸೆಲೆಬ್ರಿಟಿಗಳ ಹೊರತಾಗಿ ವಿಶ್ವದಾದ್ಯಂತ 40 ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಗೆ ಯುಎಇ ಗೋಲ್ಡನ್ ವೀಸಾ ನೀಡಿದೆ.
2019 ರಿಂದ ವಿದೇಶಿಯರಿಗೆ ಗೋಲ್ಡನ್ ವೀಸಾವನ್ನು ಯುಎಇ ಸರ್ಕಾರ ನೀಡುತ್ತಾ ಬಂದಿದೆ. ಈ ಗೋಲ್ಡನ್ ವೀಸಾವನ್ನು 5 ಅಥವಾ 10 ವರ್ಷಗಳ ಅವಧಿಗೆ ಕೊಡುತ್ತಾರೆ. ಬಳಿಕ ಅದನ್ನು ನವೀಕರಿಸಿಕೊಳ್ಳಬಹುದಾಗಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ