ಕನ್ನಡದ ನಟ ಅಭಿನವ್ ವಿಶ್ವನಾಥನ್ ಅವರ ಪರಿಚಯದ ಅಗತ್ಯವಿಲ್ಲ. ಮಾಡೆಲಿಂಗ್ ಮೂಲಕ ಬಣ್ಣದ ಜಗತ್ತಿನ ನಂಟು ಬೆಳೆಸಿಕೊಂಡಿರುವ ಅಭಿನವ್ ವಿಶ್ವನಾಥನ್ ನನ್ನರಸಿ ರಾಧೆಯ ಅಗಸ್ತ್ಯ ರಾಥೋಡ್ ಆಗಿ ಕಿರುತೆರೆಗೆ ಕಾಲಿಟ್ಟರು. ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆದಿರುವ ಅಭಿನವ್ ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ನಟಿಸುವ ಅವಕಾಶ ಪಡೆದುಕೊಂಡಿರುವ ಹ್ಯಾಂಡ್ ಸಮ್ ಹುಡುಗ.

ನನ್ನರಸಿ ರಾಧೆ ಧಾರಾವಾಹಿ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದು ತಮ್ಮ ಅಭಿಮಾನಿಗಳಿಗೆ ಕೃತಜ್ಞತೆಯ ಸಂದೇಶವನ್ನು ಬರೆದಿದ್ದಾರೆ. ಮಾತ್ರವಲ್ಲ ತಮ್ಮ ಧಾರಾವಾಹಿಗೆ ಪ್ರೀತಿ ಮತ್ತು ಬೆಂಬಲ ನೀಡಿದಕ್ಕಾಗಿ ವೀಕ್ಷಕರಿಗೆ ಅವರು ಧನ್ಯವಾದಗಳನ್ನು ತಿಳಿಸಿದರು.

“ಹಲವು ಸುಂದರ ಸಂಗತಿಗಳನ್ನು ನೋಡಲಾಗುವುದಿಲ್ಲ. ಆದರೆ ಅನುಭವಿಸಲು ಮಾತ್ರ ಸಾಧ್ಯ. ನನ್ನರಸಿ ರಾಧೆಯು ಅಂತಹ ಒಂದು ಪ್ರಯಾಣವಾಗಿದೆ. ಇದು ಖಂಡಿತವಾಗಿಯೂ ಧಾರಾವಾಹಿಯಾಗಿರಲಿಲ್ಲ, ಇದು ಅಂಬೆಗಾಲಿಡುವ ಅಗಸ್ತ್ಯನಿಗೆ ಕೋಪಗೊಂಡ ಯುವಕನಾಗಿ ಶಾಂತವಾಗಿ ವಿಕಸನಗೊಂಡ ಅಗಸ್ತ್ಯನಾಗಲು ಕಲಿಸಿದ ಅನುಭವವಾಗಿದೆ” ಎಂದು ತಮ್ಮ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಇದರ ಜೊತೆಗೆ “ನನ್ನನ್ನು ಬೆಂಬಲಿಸಿದ ಮತ್ತು ನನಗೆ ಅಗತ್ಯವಿರುವಾಗಲೆಲ್ಲಾ ಸಹಕರಿಸಿದ ನಿಮ್ಮೆಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನನಗೆ ಆಶೀರ್ವಾದ ನೀಡಿದ ಬಲವಾದ ಆಕರ್ಷಕ ಪಾತ್ರಕ್ಕಾಗಿ ಅಗಸ್ತ್ಯ ರಾಥೋಡ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು, ಯಾವಾಗಲೂ ಬ್ರಹ್ಮನನ್ನು ಬೆಂಬಲಿಸುತ್ತಿರುವ ನನ್ನ ಚೋಟ್ ಮೆಣಸಿನಕಾಯಿ ಕೌಸ್ತುಭಮಣಿ ಅವರಿಗೆ ನನ್ನ ವಿಶೇಷ ಧನ್ಯವಾದಗಳು. ಈ ಅವಕಾಶಕ್ಕಾಗಿ ನರಹರಿ ಸರ್ ಮತ್ತು ವಿನೋದ್ ದೋಂಡಾಳೆ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು” ಎಂದು ಅಭಿನವ್ ವಿಶ್ವನಾಥನ್ ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.

ಅಭಿನವ್ ಅವರು ಅತಿ ಕಡಿಮೆ ಅವಧಿಯಲ್ಲಿ ತಮ್ಮ ಆನ್-ಸ್ಕ್ರೀನ್ ಪಾತ್ರ ‘ಅಗಸ್ತ್ಯ’ದ ಮೂಲಕ ಕಿರುತೆರೆ ಪ್ರೇಕ್ಷಕರ ಹೃದಯಸ್ಪರ್ಶಿಯಾದರು. ಬರೋಬ್ಬರಿ ಮೂರು ವರ್ಷಗಳ ಕಾಲ, ಅವರು ‘ಅಗಸ್ತ್ಯ’ನಾಗಿ ಕಿರುತೆರೆ ವೀಕ್ಷಕರನ್ನು ರಂಜಿಸಿದ ಅಭಿನವ್ ಮತ್ತೆ ಕಿರುತೆರೆಯಲ್ಲಿ ನಟಿಸುತ್ತಾರಾ ಅಲ್ಲ ಹಿರಿತೆರೆಗೆ ಕಾಲಿಡುತ್ತಾರಾ ಎಂದು ಕಾದುನೋಡಬೇಕಾಗಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ