Bharatha SarathiBharatha Sarathi
  • HOME
  • About Us
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಕ್ರೀಡೆ
  • ಕ್ರೈಂ ಸುದ್ದಿ
  • ರಾಜಕೀಯ
  • ರಾಜ್ಯ ಸುದ್ದಿ
  • More
    • ತಂತ್ರಜ್ಞಾನ
    • ರಾಶಿ ಭವಿಷ್ಯ
    • ರಾಷ್ಟ್ರೀಯ ಸುದ್ದಿ
    • ಲೋಕಲ್ ಸುದ್ದಿ
    • ವಾಣಿಜ್ಯ
    • ವಿಶೇಷವರದಿ
    • ಸಿನಿಮಾ
  • ಇ-ಪೇಪರ್

Subscribe to Updates

Get the latest creative news from FooBar about art, design and business.

Facebook Twitter Instagram
Trending
  • E-Paper 24 Mar 2023
  • E-Paper 22 Mar 2023
  • E-Paper 21 Mar 2023
  • E-Paper 19 Mar 2023
  • E-Paper 18 Mar 2023
  • E-Paper 17 Mar 2023
  • E-Paper 16 Mar 2023
  • E-Paper 15 Mar 2023
Facebook Twitter Instagram
Bharatha SarathiBharatha Sarathi
AD 1
  • HOME
  • About Us
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಕ್ರೀಡೆ
  • ಕ್ರೈಂ ಸುದ್ದಿ
  • ರಾಜಕೀಯ
  • ರಾಜ್ಯ ಸುದ್ದಿ
  • More
    • ತಂತ್ರಜ್ಞಾನ
    • ರಾಶಿ ಭವಿಷ್ಯ
    • ರಾಷ್ಟ್ರೀಯ ಸುದ್ದಿ
    • ಲೋಕಲ್ ಸುದ್ದಿ
    • ವಾಣಿಜ್ಯ
    • ವಿಶೇಷವರದಿ
    • ಸಿನಿಮಾ
  • ಇ-ಪೇಪರ್
Bharatha SarathiBharatha Sarathi
Home»ಕ್ರೀಡೆ»ಟೀಮ್ ಇಂಡಿಯಾದಲ್ಲಿ ಮೂವರು ಅರ್ಷದೀಪ್..?
ಕ್ರೀಡೆ

ಟೀಮ್ ಇಂಡಿಯಾದಲ್ಲಿ ಮೂವರು ಅರ್ಷದೀಪ್..?

August 2, 2022
Facebook Twitter Pinterest LinkedIn WhatsApp Reddit Email Telegram
Share
Facebook Twitter LinkedIn Pinterest Email Telegram WhatsApp

ಭಾರತ-ವೆಸ್ಟ್ ಇಂಡೀಸ್ (India vs West Indies 2nd T20) ನಡುವಣ 2ನೇ ಟಿ20 ಪಂದ್ಯವು ಹಲವು ಕಾರಣಗಳಿಗೆ ಎಲ್ಲರ ಗಮನ ಸೆಳೆಯಿತು. ಮೊದಲಿಗೆ ಟೀಮ್ ಇಂಡಿಯಾ ಆಟಗಾರರ ಲಗೇಜ್ ತಡವಾಗಿ ಕೈ ಸೇರಿದ ಕಾರಣ ಪಂದ್ಯದ ಆರಂಭ ವಿಳಂಬವಾಯಿತು. ಅದರಂತೆ 8 ಗಂಟೆಗೆ ಶುರುವಾಗಬೇಕಿದ್ದ ಪಂದ್ಯವು ರಾತ್ರಿ 11 ಗೆ ಆರಂಭವಾಯಿತು. ಇದಾಗಿ ಪಂದ್ಯದಲ್ಲಿ ಟಾಸ್ ಸೋತರೂ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಅಚ್ಚರಿ ಎಂದರೆ ರೋಹಿತ್ ಶರ್ಮಾ ಜೊತೆ ಅರ್ಷದೀಪ್ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವುದನ್ನು ಕಂಡು ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು ಒಂದು ಕ್ಷಣ ಹೌಹಾರಿದ್ದರು. ಆದರೆ ಆ ಬಳಿಕ ಅರ್ಷದೀಪ್ ಸಿಂಗ್ ಅವರ ಜೆರ್ಸಿಯಲ್ಲಿ ಸೂರ್ಯಕುಮಾರ್ ಯಾದವ್ ಆರಂಭಿಕರಾಗಿ ಆಡುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಾಯಿತು.

ಇದಾದ ಬಳಿಕ ಬೌಲಿಂಗ್ ವೇಳೆ ಅವೇಶ್ ಖಾನ್ ಕೂಡ ಅರ್ಷದೀಪ್ ಸಿಂಗ್ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ಇದರಿಂದ ಮತ್ತೆ ಕಂಫ್ಯೂಸ್. ಏಕೆಂದರೆ ಫೀಲ್ಡಿಂಗ್​ನಲ್ಲಿ ಸೂರ್ಯಕುಮಾರ್ ಯಾದವ್ ಅರ್ಷದೀಪ್ ಜೆರ್ಸಿಯಲ್ಲಿದ್ದರೆ, ಬೌಲಿಂಗ್​ನಲ್ಲಿ ಅವೇಶ್ ಖಾನ್ ಅರ್ಷದೀಪ್ ಹೆಸರಿನಲ್ಲಿ ಕಾಣಿಸಿಕೊಂಡಿದ್ದರು.

ಮತ್ತೊಂದೆಡೆ ಅರ್ಷದೀಪ್ ಸಿಂಗ್ ತನ್ನದೇ ಜೆರ್ಸಿಯಲ್ಲಿ ಕಣಕ್ಕಿಳಿದಿದ್ದರು. ಇದರೊಂದಿಗೆ ಟೀಮ್ ಇಂಡಿಯಾದಲ್ಲಿ ಮೂವರು ಆಟಗಾರರು ಅರ್ಷದೀಪ್ ಸಿಂಗ್ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ಇತ್ತ ದೂರದಿಂದ ನೋಡಿದ್ರೆ ಎಲ್ಲೆಲ್ಲೂ ಅರ್ಷದೀಪ್ ಕಾಣಿಸಿಕೊಳ್ಳುತ್ತಿದ್ದರು. ಅತ್ತ ಸ್ಟೇಡಿಯಂ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಕೂಡ ಕಂಫ್ಯೂಸ್. ಇದೀಗ ಒಂದು ಜೆರ್ಸಿಯ ಮೂಲಕ ಎಲ್ಲೆಲ್ಲೂ ಅರ್ಷದೀಪ್ ಸಿಂಗ್ ಎಂದು ಟೀಮ್ ಇಂಡಿಯಾವನ್ನು ಟ್ರೋಲ್ ಮಾಡಲಾಗುತ್ತಿದೆ.

ಮೇಲ್ನೋಟಕ್ಕೆ ಸೂರ್ಯಕುಮಾರ್ ಯಾದವ್ ಹಾಗೂ ಅವೇಶ್ ಖಾನ್ ಅರ್ಷದೀಪ್ ಅವರ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲು ಮುಖ್ಯ ಕಾರಣ ಲಗೇಜ್ ತಡವಾಗಿ ಬಂದಿರುವುದು ಎನ್ನಲಾಗಿದೆ. ಎಲ್ಲಾ ಆಟಗಾರರ ಲಗೇಜ್ ಸರಿಯಾದ ಸಮಯಕ್ಕೆ ಕೈ ಸೇರದ ಕಾರಣ ತಮ್ಮದೇ ಅಳತೆಯಲ್ಲಿದ್ದ ಅರ್ಷದೀಪ್ ಸಿಂಗ್ ಜೆರ್ಸಿಯಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಅವೇಶ್ ಖಾನ್ ಕಣಕ್ಕಿಳಿದಿದ್ದರು ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಬೇರೆಯವರ ಜೆರ್ಸಿಯಲ್ಲಿ ಇತರೆ ಆಟಗಾರರು ಕಣಕ್ಕಿಳಿಯುತ್ತಿರುವುದು ಇದೇ ಮೊದಲೇನಲ್ಲ. ಆದರೆ ಒಂದೇ ಹೆಸರಿನ ಜೆರ್ಸಿಯಲ್ಲಿ ಟೀಮ್ ಇಂಡಿಯಾದ ಮೂವರು ಆಟಗಾರರು ಮೈದಾನದಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲು ಎನ್ನಬಹುದು.

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 139 ರನ್​ಗಳ ಟಾರ್ಗೆಟ್​ ಅನ್ನು ವೆಸ್ಟ್ ಇಂಡೀಸ್ ತಂಡವು 19.2 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಚೇಸ್ ಮಾಡಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಇನ್ನು ಮೂರನೇ ಟಿ20 ಪಂದ್ಯವು ಮಂಗಳವಾರ (ಆಗಸ್ಟ್ 2) ನಡೆಯಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಮತ್ತೆ ಮೇಲುಗೈ ಸಾಧಿಸುವ ಇರಾದೆಯಲ್ಲಿದೆ.

Share. Facebook Twitter Pinterest LinkedIn Telegram Email
Previous Articleಬರೋಬ್ಬರಿ 40 ಸಿಕ್ಸ್​: ದೇಶೀಯ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್ ಆಟಗಾರನ ಸಿಡಿಲಬ್ಬರ..!
Next Article ಪ್ರೊ ಕಬಡ್ಡಿ ಲೀಗ್​ ಹರಾಜಿಗೆ ದಿನಗಣನೆ: ಹೊಸ ಪ್ರೋಮೋದಲ್ಲಿ ಮಿಂಚುತ್ತಿರುವ ಫಾಜೆಲ್ ಅತ್ರಾಚಲಿ

Related Posts

ಪ್ರೊ ಕಬಡ್ಡಿ ಲೀಗ್​ ಹರಾಜಿಗೆ ದಿನಗಣನೆ: ಹೊಸ ಪ್ರೋಮೋದಲ್ಲಿ ಮಿಂಚುತ್ತಿರುವ ಫಾಜೆಲ್ ಅತ್ರಾಚಲಿ

August 2, 2022

ಬರೋಬ್ಬರಿ 40 ಸಿಕ್ಸ್​: ದೇಶೀಯ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್ ಆಟಗಾರನ ಸಿಡಿಲಬ್ಬರ..!

August 2, 2022

Commonwealth Games: ಟಾಪ್-10 ಪಟ್ಟಿಯಲ್ಲಿ ಭಾರತಕ್ಕೆ ಸ್ಥಾನ

August 2, 2022
Ad 2
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

Recent Posts

ನಾನು ಮಾಡೆಲ್ ಆಗಿದ್ದೇನೆ ಎಂದರೆ ಅದಕ್ಕೆ ಪ್ರೇರಣೆ ಕಿಚ್ಚ ಸುದೀಪ್ – ವಿನಯಾ ಗಣೇಶ್

November 18, 2022

ಇಂಜಿನಿಯರಿಂಗ್ ಪದವಿ ಪಡೆದಿರುವ ಶ್ರುತಿ ನಟನೆಯಲ್ಲಿ ಬ್ಯುಸಿ

August 16, 2022

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಪುಟ್ಟಕ್ಕನ ಮಗಳು

August 15, 2022

ಯಶಸ್ವಿ 200 ಸಂಚಿಕೆ ಪೂರೈಸಿದ ಮುದ್ದುಮಣಿಗಳು… ಶಿವು ಪಾತ್ರಧಾರಿ ಹೇಳಿದ್ದೇನು ಗೊತ್ತಾ?

September 19, 2022
About Us
About Us
Facebook Twitter YouTube
March 2023
M T W T F S S
 12345
6789101112
13141516171819
20212223242526
2728293031  
« Feb    
Latest Posts

E-Paper 24 Mar 2023

E-Paper 22 Mar 2023

E-Paper 21 Mar 2023

© 2023 Bharatha Sarathi. Powered by FILMY SCOOP.

Type above and press Enter to search. Press Esc to cancel.